LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

ಭೂಗಳ್ಳರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಿ

ಮುಳಬಾಗಿಲು: ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಕೆಲ ಅಧಿಕಾರಿಗಳು ಕೋಟ್ಯಾಂತರ ಬೆಲೆಬಾಳುವ ಸರ್ಕಾರಿ ಜಮೀನುಗಳನ್ನು ಭೂಕಂಬಳಿಕೆದಾರರಿಗೆ ಅನುಕೂಲವಾಗುವಂತೆ ಕಡತ ತಯಾರಿ ಮಾಡಿ ಹಣ ಮಾಡುತ್ತಿದ್ದಾರೆ. ಭೂಗಳ್ಳರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಅಧಿಕಾರಿಗಳು ವಿರುದ್ಧ ಮತ್ತು ಅಭಿಲೇಖಾಲಯದಲ್ಲಿ ಕಡತಗಳು ನಾಪತ್ತೆಯಾಗಿರುವ ಬಗ್ಗೆ ತನಿಖೆ ಮಾಡಬೇಕೆಂದು ಆಗ್ರಹಿಸಿ ಡೆಮಾಕ್ರೆಟಿಕ್ ವಾರಿಯರ್ಸ್ ವತಿಯಿಂದ ನಗರದ ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಯಿತು.ಅವನಿ ಹೋಬಳಿ ಜಮನಹಳ್ಳಿ ಗ್ರಾಮದ ಸರ್ವೆ ನಂ 103 ರಲ್ಲಿ ಸುಮಾರು 20 ಎಕರೆ ಜಮೀನಿಗೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯದ ಆದೇಶ ಸೈಯದ್ ಮಸ್ತಾನ್ ಅವರ ಪರವಾಗಿದೆ. ಅದರ ವಿರುದ್ಧ ಮೇಲ್ಮನೆ ಸಲ್ಲಿಸಿ ಸರ್ಕಾರಿ ಜಮೀನನ್ನು ಉಳಿಸಬೇಕು ಜನ್ನಳ್ಳಿ ಗ್ರಾಮದ ಸರ್ವೆ ನಂಬರ್ 103ರ ಪೈಕಿ ಸರ್ವೇ ನಂ 103/9. 103/ 10. 13/ 11.103/13. ತಲಾ ನಾಲ್ಕು ಎಕರೆಯಂತೆ 16 ಎಕರೆ ಜಮೀನಿಗೆ ಕಂಪೌಂಡ್ ನಿರ್ಮಿಸಿ ಸರ್ಕಾರಿ ನಾಮ ಫಲಕ ಹಾಕಬೇಕು. ಜಮ್ನಳ್ಳಿ ಗ್ರಾಮದ ಸರ್ವೆ ನಂಬರ್ 103ರ ಪೈಕಿ 2009 ನೇ ಸಾಲಿನಲ್ಲಿ ದಲಿತ ಸಂಘರ್ಷ ಸಮಿತಿ ಹೋರಾಟ ನಡೆಸಿ 36 ಎಕರೆ ಜಮೀನಿನ ಪ್ರಕ್ರಿಯೆಗಳ ಕಡತವನ್ನು ಅಂದಿನ ತಾಸಿಲ್ದಾರ್ ಜೈ ಮಾಧವ ಅವರು ತೆಗೆದುಕೊಂಡು ಹೋಗಿದ್ದಾರೆ ಎಂಬ ಇಬ್ಬರಹ ನೀಡಿದ್ದು ನಾಪತ್ತೆಯಾಗಿರುವ ಪ್ರಕರಣ ತನಿಖೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.ಜಮನಹಳ್ಳಿ ಗ್ರಾಮದ ಸರ್ವೆ ನಂಬರ್ 6 ರಲ್ಲಿ ಸುಮಾರು 20 ಎಕರೆ ಸರ್ವೇ ನಂಬರ್ 48. 49. 52 /2 ರಲ್ಲಿ ಐದು ಎಕರೆ ಸರ್ಕಾರಿ ಜಮೀನು , ಬೃಂದಾವನ ಲೇಔಟ್ ನವರು ಒತ್ತುವರಿ ಮಾಡಿಕೊಂಡಿದ್ದು ತಿಳಿದು ಬಂದಿದ್ದು ಕೂಡಲೇ ಬಿಡಿಸಬೇಕು. ದೇವರಾಯ ಸಮುದ್ರ ಸರ್ವೇ ನಂ 653. ಕಮ್ನೂರು ಸರ್ವೆ ನಂ 180. ಹನುಮನಹಳ್ಳಿ ಗ್ರಾಮದ ಸರ್ವೆ ನಂ 199. ಬೆಟಗೇರಿಹಳ್ಳಿ ಸರ್ವೆ ನಂ 35 ರಲ್ಲಿ ಸುಮಾರು 48ನೇ ಸರ್ಕಾರಿ ಗೋಮಾಳ ಜಮೀನಿದ್ದು ಇದನ್ನು ಬೆಂಗಳೂರು ಮೂಲದ ರಿಯಲ್ ಎಸ್ಟೇಟ್ ತಿಪ್ಪಾರೆಡ್ಡಿ ಮಾಡಿಕೊಳ್ಳುತ್ತಿರುವುದು ತಿಳಿದು ಬಂದಿದೆ ಕೂಡಲೇ ಬಿಡಿಸಿಕೊಳ್ಳಬೇಕು ಎಂದು ಆಗ್ರಹಿಸಿದರು. ದೇವರಾಯ ಸಮುದ್ರ ವ್ಯಾಪ್ತಿಯ ಹಳೆ ನಂಬರ್ 138/1ರಲ್ಲಿ 4 ಎಕ್ರೆಗಳು ಮೇಲ್ಪಟ್ಟು ಸಾಜಾದ್ ಖಾನ್ ಎಂಬುದು ಕೂಡಲೇ ಬಿಡಿಸಬೇಕು. ಹೊಸಕೆರೆ ಯಾಪಿ ಸರ್ವೆ ನಂಬರ್ 52. 77 ರಲ್ಲಿ ಸುಮಾರು 60 ಎಕರೆ ಹಾಗೂ ಸರ್ವೆ ನಂಬರ್ 68 ರಲ್ಲಿ 40 ಎಕರೆ ಸರ್ಕಾರಿ ಜಮೀನಿಗೆ ಕಾಂಪೌಂಡ್ ಹಾಕಿ ನಾಮಫಲಕ ಹಾಕಬೇಕು. ದೇವರಾಯ ಸಮುದ್ರ ವ್ಯಾಪ್ತಿ ಸರ್ವೆ ನಂಬರ್ 123 ರಲ್ಲಿ ಅರವತ್ತು ಎಕರೆ ಸರ್ಕಾರಿ ಕರಾಬು ಜಮೀನನ್ನು ಉಳಿಸಿ ಸರ್ಕಾರಿ ನಾಮ ಫಲಕ ಹಾಕಬೇಕು. ಕೀಳುವಳಿ ಗ್ರಾಮಕ್ಕೆ ಸೇರಿದ ಸರ್ವೆ ನಂಬರ್ 41 ಸುಮಾರು 111 ಎಕರೆ ಜಮೀನಿಗೆ ಸರ್ಕಾರಿ ನಾಮ ಫಲ ಅಳವಡಿಸಬೇಕು. ಕುರುಬರಹಳ್ಳಿ ಯಾಕೆ ಸರ್ವೆ ನಂಬರ್ 103ರಲ್ಲಿ 45 ಹಾಗೂ ಸರ್ವೇ ನಂಬರ್ 15ರಲ್ಲಿ 50 ಎಕರೆ ಸರ್ಕಾರಿ ಜಮೀನಿಗೆ ಸರ್ಕಾರಿ ನಾಮಪಲ ಅಳವಡಿಸಬೇಕೆಂದು ಮನವಿ ಮಾಡಿದರು.ಮನವಿ ಪತ್ರ ಸ್ವೀಕರಿಸಿ ಶಾಸಕ ಸಮೃದ್ಧಿ ವಿ ಮಂಜುನಾಥ್ ಈ ಬಗ್ಗೆ ಮುಂದಿನ ಆದಿವೇಶನದಲ್ಲಿ ಪ್ರಸ್ತಾಪ ಮಾಡಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು. ಮುಖಂಡರಾದ ಕೀಳುಹೊಳಲಿ ಸತೀಶ್. ಮೆಕಾನಿಕ್ ಶ್ರೀನಿವಾಸ್.ಕಸವಿರೆಡ್ಡಿಹಳ್ಳಿ ರಾಜು. ಹೊಸಕೆರೆ ರಘು. ಲಯನ್ ಹರೀಶ್. ಕಿಟ್ಟಿ. ಲೇಬರ್ ಕಿಷ್ಣಮೂರ್ತಿ. ರೆಡ್ಡಹಳ್ಳಿ ಅಭಿ. ರಾಮಚಂದ್ರ. ಶ್ರೀನಿವಾಸ್. ಲೋಕೇಶ್. ಸುರೇಶ್. ಮಧು. ಅಶ್ವಥ್. ಸುಭಾನ್ ಮತ್ತಿತರರು ಹಾಜರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು