ನಿಮ್ಮ ಅಡುಗೆ ಮನೆಯಲ್ಲೊಂದು ಮೌನ ಕ್ರಾಂತಿ ಮಾಡಲಿವೆ.ರಾಷ್ಟ್ರೀಯ, ಫೆಬ್ರವರಿ 2026: ಟಿಟಿಕೆ ಪ್ರೆಸ್ಟೀಜ್ ಮನೆ ಮತ್ತು ಅಡುಗೆಮನೆ ಪರಿಹಾರಗಳನ್ನು ಒದಗಿಸುವ ಭಾರತದ ಅತ್ಯಂತ ವಿಶ್ವಾಸಾರ್ಹ ಕಂಪನಿಗಳಲ್ಲಿ ಒಂದು. ಈಗ ಈ ಕಂಪನಿ, ಆಧುನಿಕ ಭಾರತೀಯ ಅಡುಗೆಮನೆಗಳಿಗಾಗಿ ಬಹಳ ಕಡಿಮೆ ವಿದ್ಯುತ್ ಬಳಸಿ ದಕ್ಷವಾಗಿ ಕೆಲಸ ಮಾಡುವುದರ ಜೊತೆಗೆ ಅಡುಗೆ ಮನೆಯ ಅಂದವನ್ನು ಹೆಚ್ಚಿಸುವಂತೆ ವಿನ್ಯಾಸಗೊಳಿಸಲಾದ ತನ್ನ ಪ್ರೀಮಿಯಾ ಬಿಎಲ್‌ಡಿಸಿ ಚಿಮಣಿಗಳನ್ನು ಬಿಡುಗಡೆ ಮಾಡಿದೆ. ಅತ್ಯಾಧುನಿಕ ಬಿಎಲ್‌ಡಿಸಿ ತಂತ್ರಜ್ಞಾನವಿರುವ ಈ ಹೊಸ ಚಿಮಣಿಗಳು ನಿಮ್ಮ ನಿತ್ಯದ ಅಡುಗೆ ಕೆಲಸವನ್ನು ಸುಗಮಗೊಳಿಸಲಿವೆ. ಇದು ನಿಮ್ಮ ಬಗ್ಗೆ ಪ್ರೆಸ್ಟೀಜ್‌ಗೆ ಇರುವ ನಿರಂತರ ಕಾಳಜಿಯನ್ನು ಪ್ರತಿಬಿಂಬಿಸುತ್ತದೆ.
ಪ್ರೀಮಿಯಾ ಬಿಎಲ್‌ಡಿಸಿ ಚಿಮಣಿಗಳಲ್ಲಿ ಟಾರ್ಕ್ ಜೆಟ್ ಸಕ್ಷನ್ ತಂತ್ರಜ್ಞಾನವಿದೆ. ಇದು ಭಾರತೀಯರ ಮನೆಗಳಲ್ಲಿ ಭಾರಿ ಪ್ರಮಾಣಗಳಲ್ಲಿ ಅಡುಗೆ ಸಿದ್ಧಗೊಳಿಸುವಾಗಲೂ ಸಹ ಹೊಗೆ, ಜಿಡ್ಡು ಮತ್ತು ಇತರೆ ವಾಸನೆಗಳನ್ನು ಪರಿಣಾಮಕಾರಿಯಾಗಿ ತೆಗೆದುಹಾಕುತ್ತವೆ. ಈ ಚಿಮಣಿಗಳು 1400 m³/ಗಂಟೆವರೆಗಿನ ಪ್ರಬಲ ಹೀರುವ ಸಾಮರ್ಥ್ಯವನ್ನು ಹೊಂದಿವೆ. ಹೆಚ್ಚಿನ ಸಾಮರ್ಥ್ಯದ ಬಿಎಲ್‌ಡಿಸಿ ಮೋಟಾರ್‌ನಿಂದ ನಡೆಯುವ ಈ ಚಿಮಣಿಗಳು ಶಾಂತವಾಗಿ ಆದರೆ ಹೆಚ್ಚು ಕೆಲಸ ಮಾಡುತ್ತವೆ. ಗಮನಾರ್ಹವಾಗಿ ಕಡಿಮೆ ವಿದ್ಯುತ್ತನ್ನು ಬಳಸುತ್ತವೆ. ಅಡುಗೆಮನೆ ಹೆಚ್ಚು ಆರಾಮದಾಯಕವಾಗಿ ಮತ್ತು ಶಬ್ದ-ಮುಕ್ತವಾಗಿರುತ್ತದೆ.
ಈ ಚಿಮಣಿಗಳು ಟರ್ಬೊ ಮೋಡ್ ಸೇರಿದಂತೆ 10 ವೇಗಗಳಲ್ಲಿ ಕೆಲಸ ಮಾಡುತ್ತವೆ. ಹೊಗೆ ಹೆಚ್ಚಿದ್ದಾಗ, ಚಿಮಣಿ 1600 ಆರ್‌ಪಿಎಂ ವರೆಗಿನ ವೇಗದಲ್ಲಿ ಕೆಲಸ ಮಾಡುತ್ತದೆ. ನಿಮ್ಮ ಇಂಗಿತದ ಪ್ರಕಾರ ಕೆಲಸ ಮಾಡುವಂತೆ ವಿನ್ಯಾಸಗೊಂಡಿರುವ ಈ ಚಿಮಣಿಗಳನ್ನು ಸನ್ನೆ ಮತ್ತು ಸ್ಪರ್ಶಗಳೊಂದಿಗೆ ನಿಯಂತ್ರಿಸಬಹುದು. ರೋಮಾಂಚಕ ಬಣ್ಣಗಳಲ್ಲಿ ಬರುವ ಈ ಉಪಕರಣವನ್ನು ಸಲೀಸಾಗಿ ನಿರ್ವಹಿಸಬಹುದು.
ಇದು ಬಳಸಲು ಬಹಳ ಸುಲಭ ಹಾಗೂ ನಿರ್ವಹಣೆಯೂ ಸಲೀಸು. ಪ್ರೀಮಿಯಾ ಬಿಎಲ್‌ಡಿಸಿ ಚಿಮಣಿಗಳಲ್ಲಿ ಹೀಟ್ ಆಟೊ-ಕ್ಲೀನ್ ತಂತ್ರಜ್ಞಾನವಿದೆ ಜೊತೆಗೆ, ಫಿಲ್ಟರ್-ಲೆಸ್. ಯಾವುದೇ ಸಮಸ್ಯೆ ಇಲ್ಲದೆ ನಿರ್ವಹಿಸಬಹುದು ಮತ್ತು ಕಾರ್ಯಕ್ಷಮತೆಯೂ ಸ್ಥಿರವಾಗಿರುತ್ತದೆ. ಇನ್ನೂ ಚೆನ್ನಾಗಿರುವುದು ಬೇಕೆಂದರೆ ಅಲ್ಟ್ರಾ-ಸ್ಲಿಮ್ ಬಾಡಿಯ ಚಿಮಣಿಗಳನ್ನು ಕೊಳ್ಳಬಹುದು. ಇವುಗಳಲ್ಲಿ ಹೈ-ಕೆಪ್ಯಾಸಿಟಿ ಆಯಿಲ್ ಕಲೆಕ್ಟರ್, ಎಲ್‌ಇಡಿ ಲ್ಯಾಂಪ್‌ಗಳು ಇರುತ್ತವೆ. ಹಾಗಾಗಿ ಕ್ಲೀನಿಂಗ್ ಸುಲಭ, ಅಡುಗೆಮನೆಯಲ್ಲಿ ಒಳ್ಳೆಯ ಬೆಳಕಿರುತ್ತದೆ. ಬಾಳಿಕೆ ಬರುವ ಕಪ್ಪು ಪುಡಿ-ಲೇಪಿಸಿದ ಫಿನಿಶ್‌ನಿಂದ ಚಿಮಣಿ ಇನ್ನಷ್ಟು ಆಕರ್ಷಕ. ಪ್ರೀಮಿಯಾ ಬಿಎಲ್‌ಡಿಸಿ ಚಿಮಣಿಯನ್ನು ತಜ್ಞರು ಬಂದು ಉಚಿತವಾಗಿ ಇನ್‌ಸ್ಟಾಲ್ ಮಾಡಿಕೊಡುತ್ತಾರೆ. ರೂ.2249 ಮೌಲ್ಯದ ಪ್ರೀಮಿಯಂ ಇನ್ಸ÷್ಟಲೇಶನ್ ಕಿಟ್ ಅನ್ನು ಸಹ ಉಚಿತವಾಗಿ ನೀಡಲಾಗುತ್ತದೆ ಮತ್ತು ಬಿಎಲ್‌ಡಿಸಿ ಮೋಟಾರ್‌ಗೆ ಜೀವಿತಾವಧಿ ವಾರಂಟಿ ಇರುತ್ತದೆ. ಇದರಿಂದ ಗ್ರಾಹಕರು ದೀರ್ಘ ಕಾಲ ಯಾವುದೇ ಚಿಂತೆ ಇಲ್ಲದೆ ಈ ಚಿಮಣಿಗಳನ್ನು ಬಳಸಬಹುದು. ವಿವಿಧ ಅಡುಗೆ ಪ್ರಮಾಣಗಳಿಗೆ ಸರಿಹೊಂದುವAತೆ ಈ ಶ್ರೇಣಿ ಎರಡು ಗಾತ್ರಗಳಲ್ಲಿ ಲಭ್ಯವಿದೆ: ಸಣ್ಣ ಮತ್ತು ಮಧ್ಯಮ ಗಾತ್ರದ ಅಡುಗೆಮನೆಗಳಿಗೆ ಸೂಕ್ತವಾದ ಪ್ರೀಮಿಯಾ ಬಿಎಲ್‌ಡಿಸಿ 60 ಸೆಂ.ಮೀ ಚಿಮಣಿ, ಇದರ ಎಂಆರ್‌ಪಿ ರೂ.30,900 ಆದರೆ ಗ್ರಾಹಕರಿಗೆ ರೂ.16,995 ಬೆಲೆಯಲ್ಲಿ ನೀಡಬಹುದು. ದೊಡ್ಡ ಅಡುಗೆಮನೆಗಳಿಗಾಗಿ ವಿಶಾಲ ವ್ಯಾಪ್ತಿಯ ಮತ್ತು ಹೆಚ್ಚಿನ ಸಾಮರ್ಥ್ಯದ ಪ್ರೀಮಿಯಾ ಬಿಎಲ್‌ಡಿಸಿ 90 ಸೆಂ.ಮೀ ಚಿಮಣಿ. ಇದರ ಎಂಆರ್‌ಪಿ ರೂ.32,720 ಆದರೆ ಗ್ರಾಹಕರಿಗೆ ರೂ.16,995 ಬೆಲೆಯಲ್ಲಿ ನೀಡಬಹುದು. ಪ್ರೀಮಿಯಾ ಬಿಎಲ್‌ಡಿಸಿ ಚಿಮಣಿಗಳು: ಟಿಟಿಕೆ ಪ್ರೆಸ್ಟೀಜ್‌ನ ತಂತ್ರಜ್ಞಾನ-ಚಾಲಿತ, ಇಂಧನ-ಸಮರ್ಥ ಅಡುಗೆಮನೆ ಪರಿಹಾರಗಳ ಪೋಟ್ಫೋಲಿಯೊವನ್ನು ಮತ್ತಷ್ಟು ವಿಸ್ತರಿಸಿದೆ. ಸಾಮರ್ಥ್ಯ, ಅನುಕೂಲ ಮತ್ತು ಸಮಕಾಲೀನ ವಿನ್ಯಾಸ ಎಲ್ಲವೂ ಇವುಗಳಲ್ಲಿ ಮೇಳೈಸಿವೆ. ಭಾರತೀಯರಿಗೆ ಟಿಟಿಕೆ ಬ್ರ್ಯಾಂಡ್ ನಶ್ರೇಷ್ಠ ಪರಂಪರೆಯ ಮೇಲಿರುವ ನಂಬಿಕೆ ಮತ್ತು ವಿಶ್ವಾಸವನ್ನು ಈ ಹೊಸ ಶ್ರೇಣಿ ಮತ್ತಷ್ಟು ಬಲಪಡಿಸುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂದರ್ಶಿಸಿ: www..ttkpresitage.com
ಟಿಟಿಕೆ ಪ್ರೆಸ್ಟೀಜ್ ಕುರಿತು (https://shop.ttkpresitage.com/) ಟಿಟಿಕೆ ಪ್ರೆಸ್ಟೀಜ್ ಲಿಮಿಟೆಡ್, ಟಿಟಿಕೆ ಗ್ರೂಪ್‌ನ ಭಾಗವಾಗಿದೆ. ಕಳೆದ ಆರು ದಶಕಗಳಿಂದ ಟಿಟಿಕೆ ಪ್ರೆಸ್ಟೀಜ್ ಲಿಮಿಟೆಡ್, ದೇಶದ ಗೃಹಿಣಿಯರ ಅಗತ್ಯಗಳನ್ನು ಪೂರೈಸುತ್ತಾ ಭಾರತದ ಅತಿದೊಡ್ಡ ಅಡುಗೆಮನೆ ಅ ಸಂಸ್ಥೆಯಾಗಿ ಹೊರಹೊಮ್ಮಿದೆ. ಪ್ರತಿಯೊಂದು ಪ್ರೆಸ್ಟೀಜ್ ಬ್ರ್ಯಾಂಡ್ ಉತ್ಪನ್ನವನ್ನು, ಸುರಕ್ಷತೆ, ಆವಿಷ್ಕಾರ, ಬಾಳಿಕೆ ಮತ್ತು ವಿಶ್ವಸನೀಯತೆಯ ಆಧಾರಸ್ತಂಭಗಳ ಮೇಲೆ ನಿರ್ಮಾಣ ಮಾಡಲಾಗಿರುವುದರಿಂದ, ಕೋಟ್ಯಂತರ ಮನೆಗಳಲ್ಲಿ ಬ್ರ್ಯಾಂಡ್ ಮೊದಲ ಆಯ್ಕೆಯ ಬ್ರ್ಯಾಂಡ್ ಆಗಿದೆ. ಅದು ಯುಕೆದ ಹಾರ್ವುಡ್ ಹೋಂವೇರ್ಸ್ ಖರೀದಿಸಿತ್ತು ಮತ್ತು ಆಗಸ್ಟ್ 2017ರಲ್ಲಿ ಭಾರತದಲ್ಲಿ ಜಡ್ಜ್ ಬ್ರ್ಯಾಂಡ್ ಪರಿಚಯಿಸಿತ್ತು.