ಅಮೋಘ ಪ್ರದರ್ಶನ ನೀಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ 42ನೇ ಪಂದ್ಯದಲ್ಲಿ ಏಪ್ರಿಲ್ 30ರ ಗುರುವಾರ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಸದ್ಯ ಆಡಿರುವ 8 ಪಂದ್ಯಗಳ ಪೈಕಿ 6 ಗೆಲುವು ಮತ್ತು 2ರಲ್ಲಿಸೋಲು ಕಂಡಿರುವ ಕಳೆದ ಬಾರಿಯ ಚಾಂಪಿಯನ್ ಆರ್ಸಿಬಿ, ಪ್ರಸ್ತುತ 12 ಅಂಕಗಳನ್ನು ಹೊಂದಿದ್ದು ಐಪಿಎಲ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಗುರಿ ಹೊಂದಿದೆ.ಟೂರ್ನಿಯ ಅರ್ಧ ಭಾಗ ಮುಗಿದಿರುವ ಕಾರಣ ಎಲ್ಲತಂಡಗಳ ನಡುವೆ ಪ್ಲೇಆಫ್ ಲೆಕ್ಕಾಚಾರ ಶುರುವಾಗಿದೆ. ಹೀಗಾಗಿ ಅಂಕಪಟ್ಟಿಯಲ್ಲಿ ಮೇಲೇರಲು ಎಲ್ಲತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಅತ್ತ ಮಾಜಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಸಹ ಆಡಿದ 8 ಪಂದ್ಯಗಳಲ್ಲಿ ತಲಾ ನಾಲ್ಕು ಗೆಲುವು ಮತ್ತು ಸೋಲುಗಳನ್ನು ಕಂಡಿದೆ. 8 ಅಂಕಗಳನ್ನು ಹೊಂದಿರುವ ಶುಬ್ಮನ್ ಗಿಲ್ ಬಳಗ, ಸ್ಥಿರ ಪ್ರದರ್ಶನ ನೀಡಲು ಎದುರು ನೋಡುತ್ತಿದೆ.ಮುಂಬಯಿ ಇಂಡಿಯನ್ಸ್ ಮತ್ತು ಆರ್ಸಿಬಿ ವಿರುದ್ಧ ಪರಾಭವಗೊಂಡ ನಂತರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 8 ವಿಕೆಟ್ಗಳ ಭರ್ಜರಿ ಜಯದೊಂದಿಗೆ ಗೆಲುವಿನ ಹಾದಿಗೆ ಮರಳಿರುವ ಗುಜರಾತ್, ಆರ್ಸಿಬಿ ಎದುರಿನ ಹಿಂದಿನ ಸೋಲಿಗೆ ಮುಯ್ಯಿ ತೀರಿಸಿಕೊಳ್ಳಲು ಎದುರು ನೋಡುತ್ತಿದೆ. ಏಪ್ರಿಲ್ 24ರಂದು ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ 205 ರನ್ ಗಳಿಸಿಯೂ ಗುಜರಾತ್ 5 ವಿಕೆಟ್ಗಳಿಂದ ಪರಾಭವಗೊಂಡಿತ್ತು.ಹಾಲಿ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಅಗ್ರ ಮೂರು ತಂಡಗಳಲ್ಲಿಒಂದಾಗಿರುವ ಆರ್ಸಿಬಿ, ಇದುವರೆಗೂ ಉತ್ತಮ ಪ್ರದರ್ಶನ ಕಾಯ್ದುಕೊಂಡಿದೆ. ಕೆಲವು ಪಂದ್ಯಗಳಲ್ಲಿ ಬ್ಯಾಟರ್ಗಳು ಮಿಂಚಿದರೆ, ಇನ್ನು ಕೆಲುವು ಪಂದ್ಯಗಳಲ್ಲಿಬೌಲರ್ಗಳು ಕಂಗೊಳಿಸಿದ್ದಾರೆ. ಅದರಲ್ಲೂಹಿಂದಿನ ಡೆಲ್ಲಿಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹೇಜಲ್ವುಡ್ ಜೋಡಿ ತಮ್ಮ ಬೌಲಿಂಗ್ ಪರಾಕ್ರಮ ಮೆರೆದಿದ್ದಾರೆ.ಹೇಗಿದೆ ಮೋದಿ ಕ್ರೀಡಾಂಗಣದ ಪಿಚ್?
ಉಭಯ ತಂಡಗಳು 7 ಬಾರಿ ಎದುರಾಗಿದ್ದು, ನಾಲ್ಕರಲ್ಲಿ ಆರ್ಸಿಬಿ ಮತ್ತು 3ರಲ್ಲಿ ಗುಜರಾತ್ ಗೆಲುವು ಸಾಧಿಸಿವೆ. ಇನ್ನು ನರೇಂದ್ರ ಮೋದಿ ಕ್ರೀಡಾಂಗಣ ಬ್ಯಾಟಿಂಗ್ ಸ್ನೇಹಿಯಾಗಿದ್ದು ರನ್ ಮಳೆಯನ್ನು ನಿರೀಕ್ಷಿಸಲಾಗಿದೆ. ಸ್ಪಿನ್ನರ್ ಗಳಿಗೂ ಈ ಪಿಚ್ ನೆರವು ನೀಡಬಹುದೆಂದು ಹೇಳಲಾಗುತ್ತಿದೆ. ಏನೇ ಇದ್ದರೂ ಪಂದ್ಯದ ಎರಡನೇ ಅವಧಿಯಲ್ಲಿ ಇಬ್ಬನಿಯ ಪ್ರಭಾವ ಇರುವುದರಿಂದ ಟಾಸ್ ಗೆದ್ದವರು ಮೊದಲು ಫೀಲ್ಡಿಂಗ್ ಆಯ್ದುಕೊಳ್ಳುವ ಸಾಧ್ಯತೆಯೇ ಹೆಚ್ಚು.
ಅಗ್ರಸ್ಥಾನದ ಮೇಲೆ ಆರ್ಸಿಬಿ ಚಿತ್ತ



