ಯಾರೇ ಆಗಲೀ, ಸಾಧನೆ ಮಾಡಿದಾಗ, ಅವರ ಬೆನ್ನನ್ನು ತಟ್ಟಿ ಪ್ರೋತ್ಸಾಹ ಮಾಡುವುದು. ಅವರ ಬಗ್ಗೆ ಒಂದೆರಡು ಒಳ್ಳೆಯ ಮಾತುಗಳನ್ನು ಆಡುವುದು ಜನಸಾಮಾನ್ಯರಾದ ನಾವುಗಳು ಅವರಿಗೆ ಕೊಡುವ ಗೌರವವಲ್ಲವೇ? ಇಷ್ಟು ದಿನಗಳ ಕಾಲ ರಾಜಕಾರಣದಲ್ಲಿ ಹಲವು ಮಹತ್ವದ ಸ್ಥಾನಮಾನಗಳನ್ನು ಅನುಭವಿಸಿ, ಈಗ ಸಕ್ರಿಯ ರಾಜಕಾರಣದಲ್ಲಿ ನಿಮಗೆ ಜೊತೆಗಿರುತ್ತೇನೆ. ಮತ್ತೊಮ್ಮೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುತ್ತೇನೆ ಎಂದು ಪಣತೊಟ್ಟಿರುವ ಸಿದ್ದರಾಮಯ್ಯರ ಈ ಹೊಸ ಇನ್ನಿಂಗ್ಸ್ಗೆ ಒಳ್ಳೆಯದಾಗಲಿ ಎಂದು ಆಶಿಸೋಣ. ಆಲ್ ದಿ ಬೆಸ್ಟ್ ಸಿದ್ದರಾಮಯ್ಯ ಸರ್!
ಹಿರಿಮೆಯ ಜೊತೆಗೆ ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿ ಸಿದ್ದರಾಮಯ್ಯ ಎಂಬ ಹೆಸರಿನ ಜೊತೆಗೆ ತಾವೊಬ್ಬ ಆರ್ಥಿಕ ತಜ್ಞನಾಗಿ ರಾಜ್ಯ ಅರ್ಥರಾಮಯ್ಯನಾಗಿ ಕೀರ್ತಿ ಪಡೆದುಕೊಂಡವರ ಯಶೋಗಾಥೆ.
ಅದು 1980ರ ಕಾಲ. ಅಂದರೆ ಇಷ್ಟೆಲ್ಲಾ ಸಾಮಾಜಿಕ ಕಳಕಳಿ ಇಟ್ಟುಕೊಂಡು ಜನ ಜೀವನ ಮಾಡುತ್ತಿದ್ದ ಕಾಲವಲ್ಲ. ಆದ್ರೂ ಕೂಡ ಮೈಸೂರು ಜಿಲ್ಲೆಯ ಸಿದ್ದರಾಮನ ಹುಂಡಿಯಲ್ಲಿ ಹುಟ್ಟಿದ್ದ ಸಿದ್ದರಾಮಯ್ಯ, ರಾಜ್ಯ ರಾಜಕಾರಣದಲ್ಲಿ ಉನ್ನತ ಮಟ್ಟಕ್ಕೆ ಬೆಳೆದಿದ್ದು ಮಾತ್ರ ಅಚ್ಚರಿ ಎಂದರೆ ತಪ್ಪಾಗುವುದಿಲ್ಲ.
ಅಪ್ಪನ ಕನಸು ಮಗ ಓದಿ ದೊಡ್ಡ ಆಫೀಸರ್ ಆಗಲಿ ಎಂಬುದೇ ಆಗಿತ್ತು. ಅದೇ ರೀತಿ ಮೂರು, ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾಗಲೇ ಸಿದ್ದರಾಮಯ್ಯ, ಕನ್ನಡದಲ್ಲಿ ನಿಸ್ಸೀಮರಾಗಿದ್ದರು. ಆ ಬಾಲಕನ ಕನ್ನಡ ವ್ಯಾಕರಣಕ್ಕೆ ಮನ ಸೋಲದವರಿಲ್ಲ. ಸಂಧಿ, ಸಮಾಸಗಳನ್ನು ಬಹಳ ಅಚ್ಚುಕಟ್ಟಾಗಿ ಕಲಿತ ಪೋರ ಸಿದ್ದರಾಮಯ್ಯ. ಸಿದ್ದರಾಮನಹುಂಡಿಯಲ್ಲಿ ಕುರಿ ಮೇಯಿಸಿಕೊಂಡಿದ್ದ ಇವರು ನೋಡ ನೋಡುತ್ತಿದ್ದಂತೆ ಮೈಸೂರು ಪಟ್ಟಣ ಸೇರಿಕೊಂಡು, ಪದವೀಧರರಾಗಿಬಿಟ್ಟರು. ಬಳಿಕ ವಕೀಲರಾಗಬೇಕೆಂಬ ದಾರಿ ತುಳಿದ ಸಿದ್ದರಾಮಯ್ಯ, ಎಲ್ಎಲ್ಬಿ ಯನ್ನು ಮುಗಿಸಿದರು. ವಿದ್ಯಾರ್ಥಿ ಜೀವನದಲ್ಲೇ ಸಮಾಜದ ಕಡೆ ಒಲವಿದ್ದ ವ್ಯಕ್ತಿಯಾದ ಕಾರಣ, ಹೋರಾಟದ ಪ್ರವೃತ್ತಿ ಸಹಜವಾಗಿಯೇ ಅವರಿಗೆ ಮೈಗೂಡಿತ್ತು. ಸಿದ್ದರಾಮಯ್ಯ ಪಂಚಾಯತಿ ಚುನಾವಣೆಗೆ ಸ್ಪರ್ಧೆ ಮಾಡಿಯೇ ಬಿಟ್ಟರು. ಅಲ್ಲಿಂದ ಆರಂಭವಾಯಿತು ನೋಡಿ ಅವರ ರಾಜಕಾರಣದ ಪಯಣ.
1983 ರಲ್ಲಿ ಮೊದಲ ಬಾರಿಗೆ ವಿಧಾನಸಭೆಗೆ ಪ್ರವೇಶ ಪಡೆದ ಸಿದ್ದರಾಮಯ್ಯ ಹಿಂತಿರುಗಿ ನೋಡಲೇ ಇಲ್ಲ. ಶಾಸಕರಾಗಿ ಹೆಚ್.ಡಿ.ದೇವೇಗೌಡರಂತಹ ಘಟಾನುಘಟಿ ರಾಜಕಾರಣಿಗಳ ಒಡನಾಟಕ್ಕೆ ಬಂದAತಹ ಇವರು, ಆ ಕಾಲದ ರಾಮಕೃಷ್ಣ ಹೆಗಡೆ, ಗುಂಡೂರಾವ್ ಅವರುಗಳ ರಾಜಕಾರಣಗಳನ್ನು ತನ್ನ ನೀಲಿ ಕಣ್ಣುಗಳಿಂದ ನೋಡುತ್ತಲೇ ಬೆಳೆದವರು. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಪ್ರಬಲ ಒಕ್ಕಲಿಗ ಸಮುದಾಯವನ್ನು ಪ್ರತಿನಿಧಿಸುತ್ತಿದ್ರೆ, ಸಿದ್ದರಾಮಯ್ಯ ಮಾತ್ರ ಅಲ್ಪಸಂಖ್ಯಾತ, ಹಿಂದುಳಿದ ವರ್ಗ ಹಾಗೂ ದಲಿತರ ಬಗ್ಗೆ ಅಪಾರ ಕಾಳಜಿಯನ್ನು ಬೆಳೆಸಿಕೊಂಡಿದ್ದರು. ದಿನ ಕಳೆದಂತೆ ರಾಜಕೀಯ ಪ್ರವರ್ಧಮಾನಕ್ಕೆ ಬಂದ ಸಿದ್ದರಾಮಯ್ಯ ಅವರು, ಜೆ.ಹೆಚ್. ಪಟೇಲ್, ದೇವೇಗೌಡರ ಗರಡಿಯಲ್ಲಿ ಅತ್ಯಂತ ಹೆಚ್ಚು ಪ್ರಾಬಲ್ಯ ಸಾಧಿಸಲು ಮುಂದಾಗಿಬಿಟ್ಟರು. ಅವರ ಆರ್ಥಿಕ ಪ್ರಜ್ಞೆಗೆ ಎಷ್ಟೋ ಬಾರಿ ಜೆ.ಹೆಚ್. ಪಟೇಲ್, ದೇವೇಗೌಡರು ಶಹಬ್ಬಾಸ್ ಗಿರಿ ಕೊಟ್ಟಿರುವುದುಂಟು.
ಇನ್ನು ಆರ್ಥಿಕ ಸ್ಥಿತಿಗತಿಯ ಬಗ್ಗೆ ಅಪಾರ ಪ್ರಮಾಣದ ಜ್ಞಾನ ಸಂಪಾದನೆ ಮಾಡಿದ್ದ ಸಿದ್ದರಾಮಯ್ಯ ಅವರು, ಸರ್ಕಾರದ ಮಟ್ಟದಲ್ಲಿ ಆರ್ಥಿಕ ಇಲಾಖೆಯಂತಹ ಮಹತ್ವದ ಖಾತೆಗಳನ್ನು ನಿಭಾಯಿಸುವ ಚಾಣಾಕ್ಷರಾಗಿಬಿಟ್ಟರು. ಹೀಗಾಗಿ, ಅವರು ಇಂದು ಮಾಜಿ ಮುಖ್ಯಮಂತ್ರಿ ಎಂಬ ಪಟ್ಟವನ್ನು ಪಡೆದರೂ, 17 ಬಾರಿ ಬಜೆಟ್ ಮಂಡಿಸಿದ ದಾಖಲೆ ಅವರ ಹೆಸರಿನಲ್ಲಿಯೇ ಇದೆ.
ಸತತವಾಗಿ 1983, 1985 (ಉಪ-ಚುನಾವಣೆ), 1989, 1994, 2004, 2008, 2013, 2018, 2023 ಹೀಗೆ ಗೆಲುವನ್ನು ಸಾಧಿಸಿಕೊಂಡು ವಿಧಾನಸಭೆಯನ್ನು ಪ್ರವೇಶಿಸುತ್ತಲೇ ಇದ್ದರು. 1992 ರಲ್ಲಿ ಜನತಾದಳ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಹುದ್ದೆಯನ್ನು ಅಲಂಕರಿಸಿದ ಸಿದ್ದರಾಮಯ್ಯ ಅವರು, 1994 ರಲ್ಲಿ ಮೊದಲ ಬಾರಿಗೆ ಹಣಕಾಸು ಇಲಾಖೆಯ ಸಚಿವರಾಗಿ ಕಾರ್ಯನಿರ್ವಹಿಸಿದರು.
ಇನ್ನು ಇದಾದ ಬಳಿಕ ಆಗಿದ್ದೆಲ್ಲವೂ ವಿಸ್ಮಯವೇ. 1996 ರಲ್ಲಿ ಜೆ.ಹೆಚ್.ಪಟೇಲ್ರ ಕ್ಯಾಬಿನೆಟ್ನಲ್ಲಿ ಉಪ- ಮುಖ್ಯಮಂತ್ರಿ ಹುದ್ದೆ, ಇದಾದ ಬಳಿಕ ದೇವೇಗೌಡರ ಒಡನಾಟದಲ್ಲಿ ಒಂದಷ್ಟು ತಿಕ್ಕಾಟ. ಜೆಡಿಎಸ್ ಪಕ್ಷದಲ್ಲಿದ್ದುಕೊಂಡು ಅಹಿಂದ ಸಂಘಟನೆ ಮಾಡಲು ಹೋಗಿ ಪಕ್ಷದಿಂದ ಉಚ್ಛಾಟನೆಯ ಶಿಕ್ಷೆಯನ್ನು ಅನುಭವಿಸಿ, 2004 ರಲ್ಲಿ ಭಾರತೀಯ ರಾಷ್ಟಿçÃಯ ಕಾಂಗ್ರೆಸ್ ಸೇರ್ಪಡೆಯಾಗಿ ತಮ್ಮ ರಾಜಕೀಯ ದಿಕ್ಕನ್ನು ಜೊತೆಗೆ ಗುರಿಯನ್ನೇ ಅವರು ಬದಲಾಯಿಸಿಕೊಂಡರು.
ಸಕ್ರಿಯ ರಾಜಕಾರಣಿಯಾಗಿ 2004 ರಿಂದ ರಾಜಕಾರಣವನ್ನು ಗಂಭೀರವಾಗಿ ಪರಿಗಣಿಸಿದ ಸಿದ್ದರಾಮಯ್ಯ, 2008 ರಲ್ಲಿ ಕಾಂಗ್ರೆಸ್ ಪಕ್ಷದ ಶಾಸಕಾಂಗ ನಾಯಕರಾಗಿ ಆಯ್ಕೆ, 5 ವರ್ಷಗಳ ಕಾಲ ವಿಪಕ್ಷ ನಾಯಕರಾಗಿ ಕಾರ್ಯನಿರ್ವಹಣೆ ಮಾಡಿದರು. ಅಂದು ಅಕ್ರಮ ಗಣಿಗಾರಿಕೆ ವಿರುದ್ಧ ವಿಧಾನಸಭೆಯಲ್ಲಿ ಗುಡುಗಿದ ಸಿದ್ದು, ಕಾಂಗ್ರೆಸ್ ನಾಯಕರ ಜೊತೆಗೆ ಬಳ್ಳಾರಿಯವರೆಗೂ ಬೆಂಗಳೂರಿನಿಂದ ಪಾದಯಾತ್ರೆ ಮಾಡಿದರು. ಪಾದಯಾತ್ರೆಯ ಯಶಸ್ಸು, ಬಳಿಕ ಎದುರಾದ 2013 ರ ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅದ್ಭುತವಾಗಿ ಸಂಘಟಿಸಿದ ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಸ್ಥಾನಕ್ಕೇರಿಸಿತ್ತು. ಸತತ 5 ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿ ಆಗಿ ಕಾರ್ಯನಿರ್ವಹಣೆ ಮಾಡಿದ ಸಿದ್ದರಾಮಯ್ಯ ಅನೇಕ ಜನಪರ ಯೋಜನೆಗಳನ್ನು ರಾಜ್ಯದ ಜನರಿಗೆ ದೀನ ದಲಿತರಿಗೆ ನೀಡಿದ್ದು ವಿಶೇಷವಾಗಿತ್ತು. ಇನ್ನು 2018 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಸೋಲುಂಡ ಕಾರಣ, ಮುಖ್ಯಮಂತ್ರಿ ಗಾದಿಯಿಂದ ಕೆಳಗಿಳಿದ ಸಿದ್ದರಾಮಯ್ಯ ಮೈತ್ರಿ ಸರ್ಕಾರದ ಸಮನ್ವಯ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಣೆ ಮಾಡಿದ್ದಾರೆ. ಬಳಿಕ ಮೈತ್ರಿ ಸರ್ಕಾರ ಪತನವಾದಾಗ ಮತ್ತೊಮ್ಮೆ ವಿಧಾನಸಭೆಯ ವಿಪಕ್ಷ ನಾಯಕನಾಗಿ ಕಾರ್ಯೋನ್ಮುಖವಾಗಿದ್ದು, 2023 ರಲ್ಲಿ ಮತ್ತೆ
– ಜಿ.ವೈ. ಪದ್ಮಾ ನಾಗರಾಜು
ಸಿದ್ದರಾಮಯ್ಯ ಸೆಕೆಂಡ್ ಇನ್ನಿಂಗ್ಸ್!



