ಹಂಗಾಮಿ ಮುಖ್ಯಮಂತ್ರಿ ಸಿದ್ಧರಾಮಯ್ಯ “ಇಂದು ಸಂಜೆ” ಪತ್ರಿಕೆಯೊಂದಿಗೂ ಅವಿನಾಭಾವ ಸಂಬAಧ ಹೊಂದಿದ್ದರು ಎಂಬುದು ಸಂತಸದ ವಿಚಾರ. ಪ್ರಧಾನ ಸಂಪಾದಕರಾಗಿ ಪತ್ರಿಕೆಯನ್ನು ಹುಟ್ಟು ಹಾಕಿದ್ದ ವಿ.ನಾಗರಾಜು ಅವರನ್ನು ಎಲ್ಲೇ ಕಂಡರೂ “ಏನಯ್ಯಾ, ಹೇಗಿದ್ಯಾ?” ಎಂದು ಅಪ್ಪಟ ಗ್ರಾಮೀಣ ಸೊಗಡಿನ ಭಾಷೆಯಲ್ಲಿ ಸಂಬೋಧಿಸುತ್ತಿದ್ದ ಸಿದ್ದರಾಮಯ್ಯರವರು, ಹಲವು ರಾಜಕೀಯ ನಿರ್ಧಾರಗಳ ಮಹತ್ವದ ಘಟ್ಟಗಳಲ್ಲಿ ಸಂಪಾದಕರ ಜೊತೆಗೆ ಚರ್ಚೆ ನಡೆಸಿದ್ದು ವಿಶೇಷ. ಇನ್ನು ಕಳೆದ ನಾಲ್ಕು ದಶಕಗಳ ವಿ.ನಾಗರಾಜು ಹಾಗೂ ಸಿದ್ದರಾಮಯ್ಯ ಸ್ನೇಹಕ್ಕೆ ಬೆಲೆ ಕಟ್ಟಲು ಕೂಡ ಸಾಧ್ಯವಿಲ್ಲ. ಇಂದು ವಿ.ನಾಗರಾಜು ನಮ್ಮನ್ನು ಅಗಲಿದ್ದರೂ ಸಹ, ಇಂದು ಸಂಜೆ ಪತ್ರಿಕೆಯ ಮೇಲೂ ಸಿದ್ದರಾಮಯ್ಯ ಅವರು ಅದೇ ಪ್ರೀತಿ ಇಟ್ಟುಕೊಂಡಿದ್ದಾರೆ. ಪ್ರಧಾನ ಸಂಪಾದಕರಾದ ಎನ್. ಅಜಿತ್ ಸಾಗರ್ ಹಾಗೂ ವ್ಯವಸ್ಥಾಪಕ ಸಂಪಾದಕಿಯಾದ ನನಗೆ ಯಾವಾಗಲೂ ವಿನಯಪೂರ್ವಕವಾಗಿ ಮಾತುಗಳನ್ನು ಆಡಿಸುತ್ತಾ, ಪ್ರೋತ್ಸಾಹದ ಮಾತುಗಳನ್ನು ಹೇಳಿ, ನಮ್ಮ ಪತ್ರಿಕೆ ಎಂಬ ಹುರುಪನ್ನು ತುಂಬಿರುವುದನ್ನು ಇಂದು ಸಂಜೆ ತಂಡ ಮರೆಯುವುದಿಲ್ಲ.
– ಜಿ.ವೈ. ಪದ್ಮಾ ನಾಗರಾಜು
ವ್ಯವಸ್ಥಾಪಕ ಸಂಪಾದಕರು
“ಇಂದು ಸಂಜೆ”ಯ ಜೊತೆಗೂ ಸಿದ್ದು ಅವಿನಾಭಾವ ಸಂಬಂಧ!



