ಬೆಳಗಾವಿ: ವಿದ್ಯಾರ್ಥಿಗಳಿಗೆ ಬಸ್ ಸಮಸ್ಯೆ ಕುರಿತು ಬಿವೈ ವಿಜಯೇಂದ್ರ ಪೋಸ್ಟ್ ಮಾಡಿದ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ವಿಜಯೇಂದ್ರ ಅವರು ತುಮಕೂರಿನ ವಿದ್ಯಾರ್ಥಿಗಳ ಬಸ್ ಸಮಸ್ಯೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ರುಶಾಲಾ ಮಕ್ಕಳಿಗೆ ತೊಂದರೆ ಆಗದಂತೆ ಮಾಡ್ತಿದ್ದೇವೆ.
ಜನವರಿ, ಫೆಬ್ರವರಿಯಲ್ಲಿ ಹೊಸಬಸ್ ಗಳು ಬರ್ತಾವೆ. ಜೊತೆಗೆ ಡ್ರೈವರ್, ಕಂಡಕ್ಟರ್ಗಳ ನೇಮಕಾತಿ ಕೂಡ ಆಗಲಿದೆ ಈಗಿನ ಸಮಸ್ಯೆಗಳಿಗೆ ಹಿಂದಿನ ಬಿಜೆಪಿ ಸರ್ಕಾರ ಕಾರಣ ಎಂದು ದೂರಿದರು.ಸಾರಿಗೆ ಸಿಬ್ಬಂದಿಯನ್ನು ಹಿಂದೆ ನೇಮಕಾತಿ ಮಾಡಿರಲಿಲ್ಲ.
ಈಗ 9 ಸಾವಿರ ನೇಮಕಾತಿ ಮಾಡಿಕೊಳ್ತಿದ್ದೇವೆ. ಎರಡು ತಿಂಗಳಲ್ಲಿ ಈಗಿರುವ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ವಿನಾ ಕಾರಣ ನಮ್ಮ ಸರ್ಕಾರವನ್ನು ದೂಷಿಸುವುದು ಹಾಸ್ಯಾಸ್ಪದ ಎಂದಿದ್ದಾರೆ.