ಕೆ.ಆರ್.ಪೇಟೆ: ಜಿಲ್ಲಾಧಿಕಾರಿ ಡಾ. ಕುಮಾರ ಬಳಿ ಪುರಸಭೆ ವ್ಯಾಪ್ತಿಯಲ್ಲಿ ಇರುವ ಹೇಮಾವತಿ ಬಡಾವಣೆಯ ಇ-ಸ್ವತ್ತು, ಖಾತೆ ಬದಲಾವಣೆ, ಬಿಲ್ಡಿಂಗ್ ಲೈಸೆನ್ಸ್ ನೀಡುವಿಕೆ ಆಗುತ್ತಿರುವ ವಿಳಂಬ, ಸ್ಲಂ ಬೋರ್ಡ್ ವತಿಯಿಂದ ನಿರ್ಮಾಣ ಮಾಡುತ್ತಿರುವ ವಾಸದ ಮನೆಗಳ ನಿರ್ಮಾಣ ಕಾರ್ಯದಲ್ಲಿ ವಿಳಂಬದಿಂದ ಹೊಸಹೊಳಲು- ಕೆ.ಆರ್.ಪೇಟೆ ಪಟ್ಟಣದ ನಾಗರೀಕರು ತೊಂದರೆಗಳನ್ನು ಅನುಭವಿಸಿದ್ದು ಕೂಡಲೇ ಸರಿಪಡಿಸಲು,
ಟಿಬಿ ವೃತ್ತದಲ್ಲಿ ನಿರ್ಮಾಣ ಮಾಡುತ್ತಿರುವ ಹೊಸಹೊಳಲು ದೇವಾಲಯದ ಆರ್ಚ್ ನಿರ್ಮಾಣಕ್ಕೆ ಬಾಕಿ ಅನುದಾನವನ್ನು ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಹಣ ಬಿಡುಗಡೆ ಮಾಡಿಸುವಂತೆ ಹಾಗೂ ಹೊಸಹೊಳಲು ಚಿಕ್ಕಕೆರೆ ಅಭಿವೃದ್ಧಿ ಕೆಲಸಕ್ಕೆ ಸರ್ಕಾರದಿಂದ ಕಾಮಗಾರಿಗೆ ಹಸಿರು ನಿಶಾನೆ ಕೊಡಿಸಲು ಶಿಫಾರಸ್ಸು ಮಾಡಲು, ಹಾಗೂ ಪಟ್ಟಣದ ಹತ್ತು ಹಲವು ಸಮಸ್ಯೆಗಳನ್ನು ಬಗೆಹರಿಸಲು ಪುರಸಭೆಗೆ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜನೆ ಮಾಡುವಂತೆ ಕೋರಲಾಯಿತು.
ಈ ಸಂದರ್ಭದಲ್ಲಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರು ಆದ ಎಚ್.ಆರ್.ಲೋಕೇಶ್, ಹಿರಿಯ ಸದಸ್ಯರು ಆದ ಕೆ.ಸಿ. ಮಂಜುನಾಥ್, ಡಿ. ಪ್ರೇಮಕುಮಾರ್, ಗಿರೀಶ್, ಪ್ರವೀಣ್, ಮಂಜು ಮುಂತಾದವರು ಹಾಜರಿದ್ದರು.