ಶುಕ್ರವಾರ ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರು ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸಿತು.
ಶುಕ್ರವಾರ ನಡೆದ ಐಪಿಎಲ್ 2026ನೇ ಆವೃತ್ತಿಯ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಅಪರೂಪದ ವೈಫಲ್ಯ ಅನುಭವಿಸಿದರು. ರಾಜಸ್ಥಾನ ರಾಯಲ್ಸ್ (ಆರ್ಆರ್) ಮತ್ತು ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ನಡುವಿನ ಪಂದ್ಯದಲ್ಲಿ ಕೇವಲ 4 ರನ್ಗಳಿಗೆ ಔಟಾದರು. ಡಿಸಿ ತಂಡದ ನ್ಯೂಜಿಲೆಂಡ್ ವೇಗಿ ಕೈಲ್ ಜೇಮಿಸನ್ ಅತ್ಯುತ್ತಮ ಯಾರ್ಕರ್ ಎಸೆದು ಸೂರ್ಯವಂಶಿಯನ್ನು ಔಟ್
ಮಾಡಿದರು. ಅವರ ವಿಕೆಟ್ ಪಡೆದ ನಂತರ ಜೇಮಿ
ಸನ್ ಆಕ್ರಮಣಕಾರಿಯಾಗಿ ಸಂಭ್ರಮಾಚರಣೆ ಮಾಡಿದರು. ಸೂರ್ಯವಂಶಿ ಮುಂದೆ ಚಪ್ಪಾಳೆ ತಟ್ಟಿ, 15 ವರ್ಷದ ಬಾಲಕನಿಗೆ ವಿದಾಯ ಹೇಳಿದರು. ಆದಾಗ್ಯೂ, ಅವರ ಪ್ರತಿಕ್ರಿಯೆಗೆ ಸಾಮಾಜಿಕ ಮಾಧ್ಯಮದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅನೇಕರು ಅವರನ್ನು ಟೀಕಿಸಿದ್ದಾರೆ.
ಜೇಮಿಸನ್ ಸಹೋದರ 15 ವರ್ಷದ ಮಗುವನ್ನು ಈ ರೀತಿಯಲ್ಲಿ ಹೊರಗೆ ಕಳುಹಿಸುವುದು ಒಳ್ಳೆಯದಲ್ಲ!. ನೀವು ನ್ಯೂಜಿಲೆಂಡ್ನವರು ಎಂದು ನನಗೆ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ.
ಕೈಲ್ ಜೇಮೀಸನ್..ರಿಲಾಕ್ಸ್..ಆತನಿಗಿನ್ನು 15 ವರ್ಷ. ನಿಮ್ಮ ವಿದಾಯದೊಂದಿಗೆ ಕಾಮ್ ಡೌನ್. ಆ ಮಗು ನಿಮಗೆ ಫೋರ್ ಬಾರಿಸಿದ್ದು ನಿಮ್ಮನ್ನು ಕೆರಳಿಸಿತು ಎಂಬ ನಿಮ್ಮ ದುರ್ಬಲ ಅಹಂಕಾರದ ಬಗ್ಗೆ ಇದು ಬಹಳಷ್ಟು ಹೇಳುತ್ತದೆ ಎಂದು ಮತ್ತೋರ್ವ ಬಳಕೆದಾರರು ಬರೆದಿದ್ದಾರೆ.
ಶುಕ್ರವಾರ ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ನಾಯಕ ರಿಯಾನ್ ಪರಾಗ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಆರ್ಆರ್ ತಂಡ ನಿಗದಿತ 20 ಓವರ್ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 225 ರನ್ ಕಲೆಹಾಕಿತು. ಧ್ರುವ್ ಜುರೇಲ್ (30 ಎಸೆತಗಳಲ್ಲಿ 42), ರಿಯಾನ್ ಪರಾಗ್ (50 ಎಸೆತಗಳಲ್ಲಿ 90), ರವೀಂದ್ರ ಜಡೇಜಾ (14 ಎಸೆತಗಳಲ್ಲಿ 20) ಮತ್ತು ಡೋನೋವನ್ ಫೆರೇರಾ (14 ಎಸೆತಗಳಲ್ಲಿ 47) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ತಂಡ ಬೃಹತ್ ಮೊತ್ತ ಕಲೆಹಾಕಿತು.
226 ರನ್ ಗುರಿ ಬೆನ್ನತ್ತಿಡ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರವಾಗಿ ಆರಂಭಿಕರಾದ ಪಾತುಮ್ ನಿಸ್ಸಂಕಾ ಮತ್ತು ಕೆಎಲ್ ರಾಹುಲ್ ಅವರ ಆಕರ್ಷಕ ಜೊತೆಯಾಟವು ತಂಡಕ್ಕೆ ಭರ್ಜರಿ ಅಡಿಪಾಯ ಒದಗಿಸಿತು. ನಿಸ್ಸಂಕಾ 62 ರನ್ ಗಳಿಸಿದರೆ, ಕೆಎಲ್ ರಾಹುಲ್ 75 ರನ್ ಗಳಿಸಿದರು. ಬಳಿಕ ನಿತೀಶ್ ರಾಣಾ 33 ರನ್ ಗಳಿಸಿ ಔಟಾದ ಬಳಿಕ ಟ್ರಿಸ್ಟಾನ್ ಸ್ಟಬ್ಸ್ ಮತ್ತು ಅಶುತೋಷ್ ಶರ್ಮಾ ಕ್ರಮವಾಗಿ 18 ಮತ್ತು 25 ರನ್ ಗಳಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.
ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ರಾಜಸ್ಥಾನ್ ರಾಯಲ್ಸ್ ವಿರುದ್ಧ ಏಳು ವಿಕೆಟ್ ಅಂತರದ ಗೆಲುವು ಸಾಧಿಸಿತು. ಈ ಗೆಲುವಿನ ಮೂಲಕ ಡಿಸಿ ಐಪಿಎಲ್ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದ್ದರೆ, ಆರ್ಆರ್ ನಾಲ್ಕನೇ ಸ್ಥಾನದಲ್ಲಿದೆ.
ವೈಭವ್ ಸೂರ್ಯವಂಶಿ ವಿಕೆಟ್ಗೆ ಆಕ್ರಮಣಕಾರಿ ಸಂಭ್ರಮಾಚರಣೆ, ಡೆಲ್ಲಿ ವೇಗಿ ವಿರುದ್ಧ ಟೀಕೆ!



