ಕೋಲಾರ: ಸರ್ಕಾರಿ ಶಾಲೆಯ ಶಿಕ್ಷಕಿ, ವಿದ್ಯಾರ್ಥಿನಿಯನ್ನು ಹೊಡೆದು ಗಾಯಗೊಳಿಸಿರುವ ಘಟನೆ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.ನಗರದ ಜಮಾಲ್ ಬಡಾವಣೆಯ ಸರ್ಕಾರಿ ಉರ್ದು ಶಾಲೆಯಲ್ಲಿ 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಜೈಬಾ (10) ಎಂದಿನಂತೆ ತನ್ನ ಗೆಳೆಯರೊಂದಿಗೆ ಆಟದ ಮೈದಾನದಲ್ಲಿ ಆಟವಾಡುತ್ತಿದ್ದ.
ಮೈದಾನದ ಪಕ್ಕದಲೇ ನಿರ್ಮಾಣವಾಗುತ್ತಿದ್ದ ಕಟ್ಟಡ ಕಾಮಗಾರಿಯನ್ನು ನೋಡಲು ಸ್ನೇಹಿತರೊಂದಿಗೆ ಹೋಗಿದ್ದರು. ಇದನ್ನು ಅದೇ ಶಾಲೆಯ ಇಂಗ್ಲಿಷ್ ಶಿಕ್ಷಕಿ ಭಾರತಿ ಗಮನಿಸಿ ವಿದ್ಯಾರ್ಥಿಗಳನ್ನು ಗೆದರಿಕೊಂಡಿದ್ದಾರೆ. ಆ ಸಂದರ್ಭದಲ್ಲಿ ಅಲ್ಲಿಂದ ತಡವಾಗಿ ಬಂದ ವಿದ್ಯಾರ್ಥಿಗಳನ್ನು ಬೆತ್ತದಿಂದ ಹೊಡೆದಿದ್ದಾರೆ. ಶಿಕ್ಷಕಿ ಭಾರತಿ ಹೊಡೆದ ಹೊಡೆತಕ್ಕೆ ಜೈಬಾಳ ಬಲಗೈ ಬೆರಳುಗಳು ಮುರಿದಿವೆ. ಅಲ್ಲದೆ ಗಾಯವಾಗಿದ್ದು, ಕಳೆದ 15 ದಿನಗಳಿಂದ ವಾಸಿಯಾಗುತ್ತಿಲ್ಲ.
ಭಾರತಿ ಶಿಕ್ಷಕಿ ಮಗಳನ್ನು ಹೊಡೆದು ಗಾಯಗೊಳಿಸಿದ್ದಾರೆ, ಇದನ್ನು ಪ್ರಶ್ನಿಸಿದ ಕಾರಣ ಯಾರಿಗೂ ದೂರು ನೀಡಬಾರದು, ಒಂದು ವೇಳೆ ನೀಡಿದರು ಏನು ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ನಮಗೆ ಬೆದರಿಕೆ ಹಾಕಿದ್ದಾರೆ. ಆ ಶಿಕ್ಷಕ ಅವರ ಮಕ್ಕಳಿಗೆ ಆಗಿದ್ದರೆ ಈ ರೀತಿ ಗಾಯ ಮಾಡಿಸುತ್ತಿದ್ದರ ಎಂದು ವಿದ್ಯಾರ್ಥಿನಿ ತಾಯಿ ಜುನ್ರ್ನಿಸಾ ಪ್ರಶ್ನಿಸಿದ್ದಾರೆ.
ಸುಮಾರು ವರ್ಷಗಳಿಂದ ಭಾರತಿ ಎಂಬ ಶಿಕ್ಷಕಿ ಅದೇ ಶಾಲೆಯಲ್ಲಿ ಕೆಲಸ ಮಾಡಿಕೊಂಡು ಇದ್ದಾರೆ. ವಿದ್ಯಾರ್ಥಿಗಳಿಗೆ ಸರಿಯಾಗಿ ಪಾಠ ಮಾಡುವುದಿಲ್ಲ, ಸರಿಯಾದ ಸಮಯಕ್ಕೆ ಶಾಲೆಗೂ ಬರುವುದಿಲ್ಲ. ಇಂತಹ ಶಿಕ್ಷಕಿ ಮಕ್ಕಳ ಮೇಲೆ ದರ್ಪ ತೋರಿದ್ದಾರೆ ಎಂದು ಆರೋಪಿಸಿದ್ದಾರೆ.