ಕೋಲಾರ:‘ಸೂರ್ಯನಿಗೆ ಸೂರ್ಯನೇ ಸಾಟಿ’ ಎಂಬಂತೆ ನಟಸಾರ್ವಭೌಮ ಡಾ|| ರಾಜ್ಕುಮಾರ್ ಅವರನ್ನು ಕನ್ನಡ ಚಿತ್ರರಂಗದ ಮಿನುಗುವ ಧ್ರುವತಾರೆ ಎಂದು ಜಿಲ್ಲಾಧಿಕಾರಿಗಳಾದ ಡಾ. ಎಂ.ಆರ್ ರವಿ ಅವರು ಬಣ್ಣಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯವರ ಸಹಯೋಗದಲ್ಲಿ ಇಂದು ನಗರದ ಟಿ.ಚನ್ನಯ್ಯ ರಂಗಮAದಿರದಲ್ಲಿ ಹಮ್ಮಿಕೊಳ್ಳಲಾದ ಡಾ. ರಾಜ್ಕುಮಾರ್ ಅವರ 97ನೇ ಜಯಂತಿ ಹಾಗೂ ಕರ್ನಾಟಕ ರತ್ನ ಡಾ.ರಾಜ್ಕುಮಾರ್ ಅವರ ಚಲನಚಿತ್ರ ಗೀತೆಗಳ ಗಾಯನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಪ್ರತಿಭಾನ್ವಿತ ನಟರಾದ ಡಾ. ರಾಜ್ಕುಮಾರ್ ಅವರು ಇಡೀ ಕನ್ನಡ ನಾಡಿಗೆ ಗೌರವ. ಎಳ್ಳಷ್ಟು ಅಹಂ ಇಲ್ಲದ ಅವರು ಎಲ್ಲರನ್ನೂ ಗೌರವ ಪ್ರೀತಿಯಿಂದ ಕಾಣುತ್ತಿದ್ದರು. ಅವರು ನಮನ್ನಗಲಿ 20 ವರ್ಷಗಳು ಕಳೆದರೂ ಸಹ ಅವರ ವರ್ಚಸ್ಸು ಇನ್ನೂ ಕಡಿಮೆಯಾಗಿಲ್ಲ, ಭಾರತೀಯ ಚಲನಚಿತ್ರ ರಂಗದಲ್ಲಿ ಅತ್ಯಂತ ಪ್ರಭಾವ ಬೀರಿದ ವ್ಯಕ್ತಿಗಳಲ್ಲಿ ಇವರೂ ಸಹ ಒಬ್ಬರು, 60, 70 ಹಾಗೂ 80ರ ದಶಕದಲ್ಲಿ ಹುಟ್ಟಿದವರ ಮೇಲೆ ಡಾ|| ರಾಜ್ಕುಮಾರ್ ನಟನೆಯ ಚಿತ್ರಗಳು ಬಹಳಷ್ಟು ಪ್ರಭಾವ ಬೀರಿದೆ. ಇವು ನಮಗೆ ನೈತಿಕತೆಯ ಪಾಠ ಹೇಳುವುದರ ಜೊತೆಗೆ ಒಳ್ಳೆಯ ಸಂದೇಶ ನೀಡುತ್ತದೆ. ಸುಖ ದಾಂಪತ್ಯ, ಸಹಬಾಳ್ವೆ, ಗೌರವ, ಪ್ರೀತಿ ಇತ್ಯಾದಿ ಅಂಶಗಳನ್ನು ಇವರ ಚಲನಚಿತ್ರಗಳಲ್ಲಿ ತಾವು ಕಾಣಬಹುದು. ಇವರ ತಂದೆ ಚಾಮರಾಜನಗರ ಜಿಲ್ಲೆಯವರು ಎಂದರು.ತಾವು ಸ್ವತಃ ಡಾ|| ರಾಜ್ಕುಮಾರ್ ಅವರ ಅಭಿಮಾನಿ ಎಂದು ಹೆಮ್ಮೆಯಿಂದ ಹೇಳಿದ ಜಿಲ್ಲಾಧಿಕಾರಿಗಳು ಇವರ ಚಲನಚಿತ್ರಗಳಿಂದ ಮಾನವೀಯ ಸಂಬAಧ, ಬಾಂಧವ್ಯ, ಸರಳತೆಯನ್ನು ಕಲಿತಿದ್ದಾಗಿ ತಿಳಿಸಿದರು. ಅಲ್ಲದೆ ಕನ್ನಡ ಭಾಷೆಯನ್ನು ಅಷ್ಟೇ ಸುಲಲಿತವಾಗಿ, ಸ್ವಚ್ಛವಾಗಿ ಮಾತನಾಡುವ ವ್ಯಕ್ತಿ ಬೇರೊಬ್ಬರಿಲ್ಲ ಎಂದು ಬಣ್ಣಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಕನ್ನಡ ಸೇನೆಯ ಉಪಾಧ್ಯಕ್ಷರಾದ ಕಲಾವಿದ ವಿಷ್ಣು, ಆಡು ಮುಟ್ಟದ ಸೊಪ್ಪಿಲ್ಲ ಎಂಬಂತ ಡಾ|| ರಾಜ್ಕುಮಾರ್ ಪ್ರವೇಶ ಮಾಡದ ಕಲಾ ಪ್ರಕಾರವಿಲ್ಲ. ಮೇರು ನಟರಾದ ಇವರ ಒಳ್ಳೆಯ ಗಾಯಕರಾಗಿಯೂ ಹೆಸರು ಗಳಿಸಿದರು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಪರ ಸಂಘಟನೆಗಳ ಗೌರವಾಧ್ಯಕ್ಷರಾದ ಆ.ಕೃ. ಸೋಮಶೇಖರ್ ಮಾತನಡಿ ಡಾ|| ರಾಜ್ಕುಮಾರ್ ಅಂತಹ ಮೇರು ನಟು ಜನಮಾನಸದಲ್ಲಿ ದಶಕಗಳ ಕಾಲ ಪ್ರಭಾವ ಬೀರಿರುವುದು ಅದ್ಭುತ. ಅತ್ಯಂತ ಪ್ರತಿಭಾನ್ವಿತರಾದ ಇವರ ಜಯಂತಿ ಆಚರಣೆ ಮಾಡುತ್ತಿದ್ದೇವೆ. ಇದು ಅವರಿಗೆ ಸಲ್ಲುವ ಗೌರವ ಎಂದರು.
ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ವಿವಿಧೋದ್ಧೇಶ ಸಹಕಾರ ಸಂಘದ ಅಧ್ಯಕ್ಷರು ಹಾಗೂ ಹಿರಿಯ ಪತ್ರಕರ್ತರಾದ ಕೆ.ಎಸ್. ಗಣೇಶ್ ಅವರು ಮಾತನಾಡಿ ಕರ್ನಾಟಕ ರತ್ನ ಡಾ|| ರಾಜ್ಕುಮಾರ್ ಅವರು ಟಿ.ಚನ್ನಯ್ಯ ರಂಗಮAದಿರ ನಿರ್ಮಾಣದಲ್ಲೂ ಸಹ ಪಾತ್ರ ವಹಿಸಿದ್ದರು. ಇವರು ಕನ್ನಡ ನಾಡಿನ ಅಸ್ಮಿತೆ. ಕೋಲಾರದ ಮಿನಿ ಕ್ರೀಡಾಂಗಣಕ್ಕೆ ಡಾ|| ರಾಜ್ಕುಮಾರ್ ಅವರ ಹೆಸರಿಡಲು ಎಲ್ಲ ಕನ್ನಡಪರ ಸಂಘಟನೆಗಳು ಜೊತೆಯಾಗಿ ಮನವಿ ಸಲ್ಲಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ|| ರಾಜ್ಕುಮಾರ್ ಛಾಯಾಚಿತ್ರಕ್ಕೆ ಗಣ್ಯರು ಪುಷ್ಪನಮನವನ್ನು ಸಲ್ಲಿಸಿದರು. ಅಲ್ಲದೆ ಹೆಸರಾಂತ ಗಾಯಕರು ಡಾ|| ರಾಜ್ಕುಮಾರ್ ಅವರ ಚಲನಚಿತ್ರ ಗೀತೆಗಳ ಗಾಯನವನ್ನು ಪ್ರಸ್ತುತ ಪಡಿಸಿದರು.
ಕಾರ್ಯಕ್ರಮದಲ್ಲಿ ಭುವನೇಶ್ವರಿ ಕನ್ನಡ ಸಂಘದ ಅಧ್ಯಕ್ಷರಾದ ಕೆ.ಆರ್. ತ್ಯಾಗರಾಜ್, ಕನ್ನಡಪರ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಚಂಬೆ ರಾಜೇಶ್, ಕರ್ನಾಟಕ ರಕ್ಷಣಾ ಸಮಿತಿಯ ಚೇತನ್ಬಾಬು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಾಥ್, ಕೋಲಾರ ಡಿವೈಎಸ್ಪಿ ಕೃಷ್ಣಪ್ರಸಾದ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಡಾ.ಕೆ.ಎನ್.ಕವನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿಜಯಲಕ್ಞ್ಮೀ, ಹಾಗೂ ಇನ್ನಿತರ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕನ್ನಡ ಚಿತ್ರರಂಗದ ಮಿನುಗುವ ಧ್ರುವತಾರೆ ಡಾ|| ರಾಜ್ಕುಮಾರ್: ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ



