LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Ramanagara

`ನೆಟ್‍ಕಲ್ ಯೋಜನೆ ಕಾಮಗಾರಿಯ ಸಮಗ್ರ ತನಿಖೆಗೆ ಲೋಕಾಯುಕ್ತಕ್ಕೆ ಪತ್ರ'

ರಾಮನಗರ: ನಗರ ವ್ಯಾಪ್ತಿಯ 31 ವಾರ್ಡ್‍ಗಳಿಗೆ 24*7 ಕುಡಿಯುವ ನೀರಿನ ಪೂರೈಕೆ ಯೋಜನೆ ಅನುಷ್ಠಾನ ನನಗೆ ತೃಪ್ತಿ ತಂದಿಲ್ಲ, ಕಾಮಗಾರಿಯ ಸಮಗ್ರ ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ಪತ್ರ ಬರೆಯುವುದಾಗಿ ಶಾಸಕ ಹೆಚ್.ಎ.ಇಕ್ಬಾಲ್‍ಹುಸೇನ್ ಹೇಳಿದರು.ತಾಲ್ಲೂಕಿನ ಬಿಳಗುಂಬ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಅಭಿವೃದ್ದಿ ಕಾಮಗಾರಿಗಳಿಗೆ ಸೋಮವಾರ ಗುದ್ದಲಿಪೂಜೆ ನೆರವೇರಿಸಿ ಗೊಲ್ಲರಚನ್ನಯ್ಯನದೊಡ್ಡಿ ಗ್ರಾಮದಲ್ಲಿ ಸುದ್ದಿಗಾರ ರೊಂದಿಗೆ ಅವರು ಮಾತನಾಡಿದರು.

ನಗರದಲ್ಲಿ ನೆಟ್‍ಕಲ್ ಯೋಜನೆ ಕೆಲಸ ಮಾಡುವಾಗ ಸಮರ್ಪಕವಾಗಿ ನೀರು ಪೂರೈಕೆ ಕಾಮಗಾರಿ ಅನುಷ್ಠಾನ ಮಾಡಿಲ್ಲ. ಇವೆಲ್ಲವುಗಳ ಜೊತೆಗೆ ಚೇಂಬರ್ ಅಳವಡಿಕೆ ಸಮರ್ಪಕವಾಗಿಲ್ಲ, ಮನೆಗಳಿಗೆ ಅಳವಡಿಸುತ್ತಿರುವ ಕಳಪೆ ಮೀಟರ್ ಮತ್ತು ನಲ್ಲಿ ಅಳವಡಿಕೆ, ಕೆಲವೆಡೆ ಕಳಪೆ ಪೈಪುಗಳನ್ನು ಸಹ ಅಳವಡಿಸಿರುವುದು ನನ್ನ ಗಮನಕ್ಕಿದೆ. ಆಗಾಗಿ ಇಡೀ ಕಾಮಗಾರಿಯ ಸಮಗ್ರ ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ಪತ್ರ ಬರೆಯುತ್ತಿದ್ದೇನೆ ಎಂದರು.

ಕೆಲಸ ನಿರ್ವಹಿಸುವಾಗ ಬಗೆದಿರುವ ರೋಡ್ ರೆಸ್ಟೋರೇಷನ್ ಒಂದು ಅಡಿಯೂ ಮಾಡಿಲ್ಲ. ಇದಕ್ಕಾಗಿ 12 ಕೋಟಿ ರೂ ಹಣ ಬಂದಿದೆ. ಆದರೆ ಅಧಿಕಾರಿಗಳು 6.5 ಕೋಟಿ ರೂ ರೆಸ್ಟೋರೇಷನ್‍ಗೆ ಖರ್ಚು ಆಗಿದೆ ಎಂದು ಸಂಬಂಧಪಟ್ಟ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖಾ ಅಧಿಕಾರಿಗಳು ಸ್ಪಷ್ಟೀಕರಣ ಕೊಡುತ್ತಿದ್ದಾರೆ. ಆದರೆ ನಗರಸಭೆ ಅಧಿಕಾರಿಗಳು ರಸ್ತೆಯಲ್ಲಿ ಸರಿಯಾದ ರೆಸ್ಟೋರೇಷನ್ ಮಾಡಿಲ್ಲ, ಕೆಲವೆಡೆ ಮಾತ್ರ ಬಗೆದಿರುವ ರಸ್ತೆಗಳಲ್ಲಿ ಸಿಲ್ಟ್ ಹಾಕಿ ಮುಚ್ಚಿದ್ದಾರೆ. ಇದಕ್ಕೆ 25 ಲಕ್ಷ ಸಹ ವೆಚ್ಚ ಬರುವುದಿಲ್ಲ ಎಂದು ತಿಳಿಸಿದ್ದಾರೆ. ಆಗಾಗಿ ಕ್ರಿಯಾ ಯೋಜನೆಯಂತೆ ಕಾಮಗಾರಿ ನಡೆದಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸುವಂತೆ ಪತ್ರ ಬರೆಯಲಾಗುವುದು ಎಂದರು.

ನೀರು ಪೂರೈಸಲು ಜೋನ್‍ಗಳನ್ನಾಗಿ ಮಾಡಿಕೊಂಡು ಕೆಲಸ ನಡೆಯುತ್ತಿದೆ. ಆದರೆ ಕೆಲವು ದೋಷಗಳು ಕಂಡು ಬಂದಿದ್ದು, ಎಲ್ಲ ವಾರ್ಡಿಗೆ ನೀರು ಸುಗಮವಾಗಿ ಹರಿದು ಹೋಗವಂತಾಗಬೇಕು. ಮನೆಗಳಿಗೆ ಮೀಟರ್ ಅಳವಡಿಕೆ, ನೀರು ಸೋರುವಿಕೆ ಪರಿಶೀಲನೆ ಮಾಡಬೇಕು. ಜೊತೆಗೆ ಹೊಸ ಲೇ-ಔಟ್‍ಗಳಿಗೂ ಸಹ ನೀರು ಕಲ್ಪಿಸಬೇಕಿದೆ. ಎಲ್ಲ ಮನೆಗಳಿಗೆ ನಲ್ಲಿಗಳ ಸಂಪರ್ಕ ಕಲ್ಪಿಸಬೇಕಿದೆ. ಇವೆಲ್ಲ ಕೆಲಸಗಳು ಗುಣಮಟ್ಟದಿಂದ ನಡೆದಾಗ ಮಾತ್ರ ಯೋಜನೆ ಸಾರ್ಥಕವಾಗಲಿದೆ ಎಂದರು.

ಈ ಸಮಯದಲ್ಲಿ ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ವಿ.ಹೆಚ್.ರಾಜು, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್‍ಕುಮಾರ್, ತಾಪಂ ಮಾಜಿ ಅಧ್ಯಕ್ಷ ಪ್ರಾಣೇಶ್, ಬಿಳಗುಂಬ ಗ್ರಾಪಂ ಅಧ್ಯಕ್ಷ ನವೀನ್‍ಗೌಡ, ಉಪಾಧ್ಯಕ್ಷೆ ಸೌಭಾಗ್ಯ, ಮಾಜಿ ಅಧ್ಯಕ್ಷರಾದ ಪಾಪಣ್ಣ, ಸದಸ್ಯರಾದ ಪ್ರಭಣ್ಣ, ಕೆಂಚೇಗೌಡ, ಶಿವಲಿಂಗ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಮಹೇಶ್, ಕಾರ್ಯದರ್ಶಿ ತಿಮ್ಮಯ್ಯ, ಹರೀಸಂದ್ರ ಗ್ರಾಪಂ ಉಪಾಧ್ಯಕ್ಷ ವೀರಭದ್ರಸ್ವಾಮಿ ಮುಖಂಡರಾದ ರವಿ, ಬಿಳಗುಂಬರಾಜೇಂದ್ರ, ವೆಂಕಟೇಶ್, ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು, ಪಕ್ಷದ ಮುಖಂಡರು ಇದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು