LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Ramanagara

ರಾಮನಗರ ಜಿಲ್ಲೆಗೆ ಮರುನಾಮಕರಣ ಕ್ರಮಕ್ಕೆ ವಿರೋಧ ರಾಜ್ಯಪಾಲರು ಜಿಲ್ಲೆಯ ಮರುನಾಮಕರಣದ ಒಪ್ಪಿಗೆಗೆ ಅಂಕಿತ ಹಾಕಬಾರದು

ರಾಮನಗರ: ಜಿಲ್ಲೆಗೆ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಿರುವ ಕ್ರಮವನ್ನು ವಿರೋಧಿಸಿ, ಸಂಘಟನೆಗಳು ಚರ್ಚೆ ಮಾಡಿದ್ದು ರಾಜ್ಯಪಾಲರನ್ನು ಬೇಟಿ ಮಾಡುವ ಬಗ್ಗೆ ಒಕ್ಕೊರಲಿನ ತೀರ್ಮಾನ ಕೈಗೊಂಡಿರುವುದಾಗಿ ಪ್ರಗತಿಪರ ಒಕ್ಕೂಟದ ಕುಮಾರಸ್ವಾಮಿ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿ ಜಿಲ್ಲೆಯ ಹೆಸರನ್ನು ಮರುನಾಮಕರಣ ಘೋಷಣೆ ಮುನ್ನಾ ಜಿಲ್ಲೆ ಹೆಸರು ಬದಲಾವಣೆ ಸಂಬಂಧ ಯಾರ ಚರ್ಚೆ ಮಾಡದೆಯೇ, ಸಚಿವ ಸಂಪುಟದಲ್ಲಿ ಸರ್ಕಾರ ಏಕಪಕ್ಷೀಯ ತೀರ್ಮಾನ ತೆಗೆದುಕೊಂಡಿರುವುದು ಜಿಲ್ಲೆಯ
ಜನತೆಗೆ ದ್ರೋಹವೆಸಗಿದೆ. ಕೂಡಲೇ ರಾಜ್ಯಪಾಲರು ಜಿಲ್ಲೆಯ ಮರುನಾಮಕರಣದ ಒಪ್ಪಿಗೆಗೆ ಅಂಕಿತ ಹಾಕ ಬಾರದು ಎಂದು ಮನವಿ ಮಾಡುತ್ತೇನೆ. ಅಲ್ಲದೆ ಜಿಲ್ಲೆಯ ಪ್ರಗತಿ ಪರರೆಲ್ಲರೂ ಸೇರಿ ಚರ್ಚೆ ನಡೆಸಿ ರಾಜ್ಯಪಾಲರನ್ನು ಶೀಘ್ರವಾಗಿ ಬೇಟಿ ಮಾಡಲಾಗುವುದು ಎಂದರು.

ಚನ್ನಪಟ್ಟಣದ ಉಪಚುನಾವಣೆಯ ಉದ್ದೇಶವಿರಿಸಿಕೊಂಡು ಜಿಲ್ಲೆಯ ಹೆಸರು ಬದಲಾವಣೆ ಮಾಡಿ ದ್ದಾರೆ. ಇದೇ ಡಿ.ಕೆ.ಶಿವಕುಮಾರ್ ರಾಮನಗರ ಜಿಲ್ಲೆ ಹೆಸರು ಘೋಷಿಸಿದಾಗ ನೀವು ಏಕೆ ಪ್ರಶ್ನೆ ಮಾಡಲಿಲ್ಲ. ರಾಮನಗರದ ಹೆಸರು ಬದಲಾವಣೆಯ ಪ್ರಸ್ತಾಪ ಬಂದಾಗಲೇ ಸ್ವಾಭಿಮಾನವಿರುವ ಕ್ಷೇತ್ರದ ಜನರು ಇಲ್ಲಿನ ಶಾಸಕರನ್ನು ಕ್ಷೇತ್ರಕ್ಕೆ ಸೇರಿಸಬಾರದಿತ್ತು ಎಂದರು.

ರೈತ ಪರವಾದ ಹೋರಾಟಗಾರರ ಮೇಲೆ ಪೋಲೀಸರು ಹಾಕಿರುವ ಕೇಸ್ ವಾಪಸ್ಸು ಪಡೆಯಲು ನೀವು ತೀರ್ಮಾನ ಮಾಡಿಲ್ಲ, ಪ್ರಮುಖ ನೀರಾವರಿ ಯೋಜನೆ ಅನುಷ್ಟಾನ ಸಂಬಂಧ ಕಠಣ ನಿಮ್ಮ ಸಚಿವ ಸಂಪುಟದಲ್ಲಿ ಕಠಿಣ ತೀರ್ಮಾನ ತೆಗೆದುಕೊಳ್ಳಲಾಗದ ನೀವು ಒಂದೇ ವಾರದಲ್ಲಿ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣಕ್ಕೆ ಸಚಿವ ಸಂಪುಟದಲ್ಲಿ ತೀರ್ಮಾನ ಮಾಡುತ್ತೀರಿ ಎಂದು ಸರ್ಕಾರದ ಕ್ರಮವನ್ನು ಪ್ರಶ್ನಿಸಿದರು.

ನವ ನಿರ್ಮಾಣ ವೇದಿಕೆಯ ರಾಜ್ಯಾಧ್ಯಕ್ಷ ವಿ.ನರಸಿಂಹಮೂರ್ತಿ ಮಾತನಾಡಿ ಕನ್ನಡಪರ, ದಲಿತ ಪರ ಹೋರಾಟಗಾರರ ಮನವಿಗಳಿಗೆ ಸ್ಪಂದಿಸದ ರಾಜ್ಯ ಸರ್ಕಾರ ಏಕಾಏಕಿ ಜಿಲ್ಲೆಯ ಹೆಸರನ್ನು ಮರು ನಾಮಕರಣ ಮಾಡಲು ಹೊರಟಿದ್ದಾರೆ. ಅಭಿವೃದ್ಧಿ ಎನ್ನುತ್ತೀರಿ ನಮ್ಮ ರಾಮನಗರ ಮಹಾನಗರ ಪಾಲಿಕೆ ಮಾಡಲು ಹೊರಟಿದ್ದೀರ, ಈಗಾಗಲೆ ಜಮೀನು ಮಾಲಿಕರು ಭೂಮಿ ಮಾರಾಟ ಮಾಡಿ ಅವರ ಬಳಿಯೆ ಕೂಲಿ ಕೆಲಸ ಮಾಡಲು ಹೋಗುತ್ತಿದ್ದಾರೆ.ಅಗಾಗಿ ರಾಮನಗರ ಜಿಲ್ಲೆಯೇ ಇರಲಿ ಆ ಹೆಸರಿನಲ್ಲಿಯೇ ಜಿಲ್ಲೆಯನ್ನು ಅಭಿವೃದ್ಧಿಪಡಿಸಿ ಎಂದು ಡಿ.ಕೆ.ಶಿವಕುಮಾರ್‌ಗೆ ಎಚ್ಚರಿಸಿದರು.

ಕಸ್ತೂರಿ ಕರ್ನಾಟಕ ಜನಪರ ವೇದಿಕೆ ನೀಲೇಶ್‌ಗೌಡ ಮಾತನಾಡಿ ಇಂತಹ ಮಹತ್ವದ ತೀರ್ಮಾನ ಕೈಗೊಳ್ಳುವ ಮುನ್ನಾ ಜಿಲ್ಲೆಯ ಪ್ರಮುಖರು ಹಾಗೂ ಸಂಘಟನೆಗಳ ಜೊತೆ ಚರ್ಚೆ ನಡೆಸಬೇಕಿತ್ತು, ಅದನ್ನು ಮಾಡದೆ ಡಿ.ಕೆ.ಶಿವಕುಮಾರ್, ಇಕ್ಬಾಲ್ ಹುಸೇನ್ ಅವರುಗಳ ಬೆಂಬಲಿಗರ ಹೆಸರಿನಲ್ಲಿರುವ ಭೂಮಿಯ ಆಸ್ತಿ ಬೆಲೆ ಹೆಚ್ಚಳಕ್ಕೆ ಅಷ್ಟೆ ಬೆಂಗಳೂರು ದಕ್ಣಿಣ ಜಿಲ್ಲೆ ಎಂದು ಹೆಸರು ಕೊಡುತ್ತಿದ್ದಾರೆ. ವೈಜ್ಞಾನಿಕವಾದ ಚಿಂತನೆಗೆ ಅನುಗುಣವಾಗಿಲ್ಲ. ಹೆಸರು ಬದಲಾವಣೆಯಿಂದ ಜನರಿಗೆ ಅನುಕೂಲಕ್ಕಿಂತ ಅನಾನುಕೂಲಗಳೇ ಹೆಚ್ಚು ಕಿಡಿಕಾರಿದರು.ರೈತ ಮುಖಂಡ ಮಲ್ಲಯ್ಯ, ವಿವಿಧ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳಾದ ಮುನಿರಾಜು, ಬಾಸ್ಕರ್, ನಾರಾಯಣ್, ನಾಗರಾಜು, ಪ್ರಶಾಂತ್, ಜಗದೀಶ್, ರಾಮೇಗೌಡ, ಶಿವುಗೌಡ ಮತ್ತಿತರರು ಸುದ್ದಿಗೋಷ್ಟಿಯಲ್ಲಿ ಇದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು