LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Ramanagara

ರಾಮನಗರ: 15 ರಂದು ನಗರಸಭೆ ಬಜೆಟ್ ಮಂಡನೆ

ರಾಮನಗರ: ಇದೇ 15 ರಂದು ನಗರಸಭೆ ಬಜೆಟ್ ಮಂಡನೆ ಮಾಡುವುದಾಗಿ ಅಧ್ಯಕ್ಷ ಕೆ.ಶೇಷದ್ರಿ (ಶಶಿ) ತಿಳಿಸಿದರು. ನಗರಸಭೆ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಟಿ ನಡೆಸಿ ಅವರು ಮಾತನಾಡಿ ದೂಳು ಮುಕ್ತ, ಪರಿಸರ ಸ್ನೇಹಿ, ಸುಂದರ ರಾಮನಗರ ಮಾಡುವ ಜೊತೆಗೆ 31 ವಾರ್ಡ್ ಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಜನಸ್ನೇಹಿ ಬಜೆಟ್ ತಯಾರಿಸಿದ್ದೇವೆ ಎಂದರು.

ಕಳೆದ ನಲವತ್ತು ದಿನಗಳಲ್ಲಿ 700 ಕ್ಕೂ ಹೆಚ್ಚು ನಗರಸಭೆ ಆಸ್ತಿಗಳಿಗೆ ನಮೂನೆ 3 ಖಾತೆಗಳನ್ನು ವಿತರಣೆ ಮಾಡಿದ್ದು, ಜನರ ನಿರೀಕ್ಷೆಗೂ ಮೀರಿ ಉತ್ತಮ ಕೆಲಸ ಮಾಡಿರುವ ತೃಪ್ತಿ ನಮಗಿದೆ. ಮಾರ್ಚ್ 30 ರೊಳಗೆ ಉದ್ಯಮ ಪರವಾನಗಿ ಕಡ್ಡಾಯ ಹೊಂದಬೇಕು, ನಗರಸಭೆಗೆ ವ್ಯಾಪಾರ ವಹಿವಾಟು ಉದ್ದಿಮೆ ಪರವಾನಗಿ ತೆರಿಗೆ ಶೇ.50 ರಷ್ಟು ಮಾತ್ರ ಬರುತ್ತಿದ್ದು, ಉಳಿದ ಶೇ.50 ರಷ್ಟು ತೆರಿಗೆ ಖೋತಾ ಆಗುತ್ತಿದೆ. ಆಗಾಗಿ ಉದ್ದಿಮೆ ಪರವಾನಗಿ ಪಡೆದರೆ 1.5 ಕೋಟಿ ರೂ ಸಂಪನ್ಮೂಲ ನಗರಸಭೆಗೆ ಬರಲಿದೆ ಎಂದರು.

ನಗರದ ರಸ್ತೆಗಳಲ್ಲಿನ ದೂಳನ್ನು ಜೆಟ್ ಮಿಷನ್ ಗಳ ಮೂಲಕ ತೆರವು ಮಾಡುವುದು, ಕುಡಿಯುವ ನೀರಿನ ಸಮಸ್ಯೆ ಅರಿಯಲು ಸಮಿತಿ ರಚಿಸಿ ವರದಿ ಪಡೆದು ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ನಗರ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮದ ವತಿಯಿಂದ 47 ಕೋಟಿ ರೂ ವೆಚ್ಚದಲ್ಲಿ ಸೀರಳ್ಳ ಸೇರಿದಂತೆ ಹಲವೆಡೆ ಕೆಲಸಗಳನ್ನು ಕೈಗೆತ್ತಿ ಕೊಂಡಿದ್ದು, ಪ್ರಗತಿಯಲ್ಲಿವೆ. ಇದಕ್ಕೆ ಸದಸ್ಯರು ಮತ್ತು ಅಧಿಕಾರಿಗಳ ಶ್ರಮವಿದೆ ಎಂದು ಶ್ಲಾಘಿಸಿದ ಅವರು ಸುಂದರ ನಗರ ನಿರ್ಮಾಣ ಮಾಡೋಣ ಎಂದರು.

ಬಡಾವಣೆಗಳಲ್ಲಿನ ಹಿರಿಯರು ಸಮಿತಿ ರಚಿಸಿಕೊಂಡು ಗಿಡಗಳಿಗೆ ನೀರುಣಿಸುವುದು ಸೇರಿದಂತೆ ಪಾರ್ಕ್‍ಗಳ ನಿರ್ವಹಣೆ ಮಾಡುವ ಕೆಲಸಕ್ಕೆ ಮುಂದಾಗಿರುವುದು ಶ್ಲಾಘನೀಯ, ಮತ್ತಷ್ಟು ನಾಗರೀಕರು ಇಂತಹ ಕಾರ್ಯ ಕ್ಕೆ ಮುಂದಾಗುವಂತೆ ಮನವಿ ಮಾಡಿದರು.ಉಪಾಧ್ಯಕ್ಷೆ ಆಯಿಷಬಾನು, ಸ್ಥಾಯಿ ಸಮಿತಿ ಅಧ್ಯಕ್ಷ ಪೈರೋಜ್ ಪಾಷ, ನಗರಸಭೆ ಪೌರಾಯುಕ್ತ ಡಾ.ಜಯಣ್ಣ, ಸದಸ್ಯರಾದ ಅಸ್ಮದ್, ಪಾರ್ವತಮ್ಮ, ಸೋಮಶೇಖರ್, ವಿಜಯಕುಮಾರಿ, ಮುತ್ತು ರಾಜು, ಗಿರಿಜಮ್ಮ, ಪವಿತ್ರಾ, ಬೈರೇಗೌಡ, ಸಮದ್, ನಿಜಾಂ ಷರೀಪ್, ಜಯಲಕ್ಷ್ಮಮ್ಮ, ನಾಗಮ್ಮ ಅಧಿಕಾರಿ ಗಳಾದ ಕಿರಣ್, ನಟರಾಜುಗೌಡ ಮತ್ತಿತರರು ಇದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು