LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Ramanagara

ಬಸವಣ್ಣ ಪ್ರತಿಮೆ ಅನಾವರಣ: ಶೇಷಾದ್ರಿ ಕಾರ್ಯಕ್ಕೆ ಗಣ್ಯರ ಮೆಚ್ಚುಗೆ

ರಾಮನಗರ: 12ನೇ ಶತಮಾನದ ಎಲ್ಲ ವಚನಕಾರರ ಅಂತಿಮ ಗುರಿ ಜಾತಿ, ಲಿಂಗ, ವರ್ಗ ಬೇಧವಿಲ್ಲದ ಸಮ ಸಮಾಜದ ನಿರ್ಮಾಣವಾಗಿತ್ತು. 20ನೇ ಶತಮಾನದಲ್ಲಿ ರಚನೆಯಾದ ಸಂವಿಧಾನದ ಆಶಯಗಳೂ ಇದೆಯಾಗಿದೆ ಎಂದು ನಿವೃತ್ತ ನ್ಯಾಯಾಧೀಶರಾದ ನಾಗಮೋಹನ್ ದಾಸ್ ಹೇಳಿದರು.
ನಗರಸಭೆ ಆವರಣದಲ್ಲಿ ನಡೆದ ಬಸವ ಜಯಂತಿ ಸಮಾರಂಭದಲ್ಲಿ ಮಾತನಾಡಿದ ಅವರು, ಎಲ್ಲ ವಚನಕಾರರು ಪ್ರಜಾಪ್ರಭುತ್ವ, ಜಾತ್ಯತೀತ ಹಾಗೂ ಸಾಮಾಜಿಕ ನ್ಯಾಯ ಎಂಬ ತತ್ವಗಳನ್ನು ಪ್ರತಿಪಾದಿಸಿದರು. ಅವರ ಕಾಲಮಾನದಲ್ಲಿ ಅನುಷ್ಠಾನಗೊಳಿಸಿದರು. ಅಂತಹದೇ ಕೆಲಸವನ್ನು 20 ನೇ ಶತಮಾನದಲ್ಲಿ ಭಾರತದ ಸಂವಿಧಾನದಲ್ಲಿ ಕಾಣುತ್ತಿದ್ದೇವೆ ಎಂದರು.
ಸಂವಿಧಾನ ಜಾರಿ ಬಂದ ಮೇಲೆ ರಾಜತ್ವ, ಪಾಳೇಗಾರಿಕೆ ಸಂಸ್ಕೃತಿ ರದ್ದುಗೊಳಿಸಿದೇವು. ಪ್ರಜಾಪ್ರಭುತ್ವ , ಜಾತ್ಯತೀತ, ಸಾಮಾಜಿಕ ನ್ಯಾಯ,ಕಲ್ಯಾಣ ರಾಜ್ಯ , ಬಹುತ್ವ ಸಂವಿಧಾನದ ಮೂಲ ತತ್ವಗಳಾಗಿವೆ. ವಚನಕಾರರು ಪ್ರತಿಪಾದಿಸಿದ ತತ್ವಗಳು ಸಂವಿಧಾನದಲ್ಲಿಯೂ ಕಾಣುತ್ತೇವೆ. ದೇಶದಲ್ಲಿ ಹುಟ್ಟುತ್ತಾ ಜಾತಿ,
ಜಾತಿಗೊಂದು ಕಸುಬು ಇತ್ತು. ಅದನ್ನು ಬದಲಾಯಿಸಲು ಅವಕಾಶ ಇರಲಿಲ್ಲ. ಜಾತಿ ಮತ್ತು ಕಸುಬನ್ನು ವಂಶಪಾರAಪರ್ಯ ಮಾಡಲಾಗಿತ್ತು. ಈ ಜಾತಿ ಅಸಮಾನತೆ ವಿರುದ್ಧ ಧ್ವನಿ ಎತ್ತಿತದವರು 12ನೇ ಶತಮಾನದ ವಚನಕಾರರು. ಆ ಸಿದ್ಧಾಂತವನ್ನು ಸಂವಿಧಾನದಲ್ಲಿ ಕಾಣಬಹುದಾಗಿದೆ ಎಂದು ಹೇಳಿದರು.
ನಮಗೆ ಬೇಕಿರುವುದು ಬಸವಣ್ಣ, ಅಂಬೇಡ್ಕರ್ ಹಾಗೂ ಸಂವಿಧಾನದ ಅಮಲಲ್ಲ. ನಮಗೆಲ್ಲ ಅವುಗಳ ಅರಿವು ಬೇಕಿದೆ. ಇವತ್ತು ಬಸವಣ್ಣ, ಅಂಬೇಡ್ಕರ್ ,ಕುವೆಂಪು ಫೋಟೋ ಇಟ್ಟುಕೊಂಡು ಜಾತಿ ರಾಜಕಾರಣ ಮಾಡುತ್ತಾರೆ. ಈ ದಾರ್ಶನಿಕರು ಒಂದು ಜಾತಿಗೆ ಸೀಮಿತರಾದವರಲ್ಲ . ಎಲ್ಲ ಜಾತಿ ಧರ್ಮಗಳ ಜನರ ಚೌಕಟ್ಟನ್ನು ಮೀರಿ ಜಗತ್ತಿನ ಮನಕುಲಕ್ಕೆ ಸಂದೇಶ ನೀಡಿದವರು. ಅವರು ಕೊಟ್ಟ ಸಂದೇಶ ಮನುಕುಲಕ್ಕೆ ಎಲ್ಲ ಕಾಲಕ್ಕೂ ಪ್ರಸ್ತುತವಾಗಿದೆ ಎಂದು ನಾಗಮೋಹನ್ ದಾಸ್ ತಿಳಿಸಿದರು.
ಸುತ್ತೂರು ಮಹಾಸಂಸ್ಥಾನ ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಬಸವಣ್ಣ ಜಗತ್ತು ಕಂಡ ಶ್ರೇಷ್ಠ ಸಂತರು. ಅವರು ಕೊಟ್ಟ ವಚನಗಳು ಬಹುಶ ಲಭ್ಯವಾಗದಿದ್ದರೆ ಬಸವಣ್ಣ ಪೌರಾಣಿಕ ವ್ಯಕ್ತಿಯಾಗಿ ಉಳಿದು ಬಿಡುತ್ತಿದ್ದರು. ಆ ವಚನಗಳು ಕಲ್ಯಾಣ ಕ್ರಾಂತಿಯ ನಂತರ ರಹಸ್ಯವಾಗ ಬಹುದಾಗಿದ್ದ ಸಾಹಿತ್ಯ ಸಂಪತ್ತು ಶರಣರಿಂದ ಕಾಪಾಡಿದ ಕಾರಣದಿಂದ ಬಸವಣ್ಣರವರ ವ್ಯಕ್ತಿತ್ವವನ್ನು ಪ್ರತ್ಯಕ್ಷವಾಗಿ ದರ್ಶನ ಮಾಡುವ ಅವಕಾಶ ಸಿಕ್ಕಿದೆ ಎಂದು ಹೇಳಿದರು.
ಬಸವಣ್ಣರವರು ಮೇಲ್ವರ್ಗದ ಸಮಾಜದಲ್ಲಿ ಜನಿಸಿದವರು. ವೈಯಕ್ತಿಕವಾಗಿ ಗೌರವಾದಾರಗಳು ಸಿಗುವ ಅವಕಾಶಗಳಿದ್ದರೂ ಸಹ ಸಮಾಜದ ಕಟ್ಟಕಡೆಯ ಮನುಷ್ಯನ ನಾಡಿ ಮಿಡಿತಕ್ಕೆ ಸ್ಪಂದಿಸುವ ಅಗತ್ಯವಿದೆ. ಎಲ್ಲರನ್ನು ಸಮಾಜದಲ್ಲಿ ಸಮಾನರಾಗಿ ಕಾಣುವ ದಿನಮಾನಗಳು ಬರಬೇಕು ಎಂದು ಕನಸು ಕಂಡವರು. ಮಾಡಿದ ಸಾಮಾಜಿಕ ಸುಧಾರಣೆಗಳು ಮಹತ್ತರವಾದದ್ದು ಎಂದು ತಿಳಿಸಿದರು.
ಬಸವಣ್ಣರವರ ಸಾಮಾಜಿಕ ಸುಧಾರಣೆಗಳು ಕೇವಲ ಲೌಕಿಕ, ಸಾಮಾಜಿಕ ಹಾಗೂ ಮೇಲುಸ್ತರದಲ್ಲಿ ನಡೆದಿದ್ದು ಅಲ್ಲ. ಮನುಷ್ಯನ ಶ್ರೇಯಸ್ಸಿಗೆ ಮೋಕ್ಷ ಸಾಧನೆ, ಧಾರ್ಮಿಕ ಪ್ರಜ್ಞೆ, ಆಧ್ಯಾತ್ಮಿಕ ನಡವಳಿಕೆ,ಅದೆಲ್ಲವನ್ನು ಒಟ್ಟುಗೂಡಿಸಿ ಮನುಷ್ಯನ ಸಮಗ್ರ ಬದಲಾವಣೆ ಆಗಬೇಕೆಂದು ಧಾರ್ಮಿಕ ನೆಲೆಗಟ್ಟಿನ ಮೇಲೆ ಸಾಮಾಜಿಕ ಸುಧಾರಣೆ ಆಗಬೇಕೆಂದು ಬಯಸಿದವರು ಎಂದು ಶ್ರೀಗಳು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಆವರಣದಲ್ಲಿ ಪ್ರತಿಷ್ಠಾಪಿಸಲಾದ ಶ್ರೀ ಬಸವೇಶ್ವರರ ಪುತ್ಥಳಿಯನ್ನು ಸುತ್ತೂರು ಮಹಾಸಂಸ್ಥಾನ ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅನಾವರಣಗೊಳಿಸಿದರು. ಕನಕಪುರ ದೇಗುಲ ಮಠದ ಮುಮ್ಮಡಿ ನಿರ್ವಾಣ ಮಹಾಸ್ವಾಮಿ, ಮರಳೇಗವಿ ಮಠದ ಶಿವರುದ್ರಸ್ವಾಮಿಗಳು, ಮಾಜಿ ಶಾಸಕರಾದ ಸಿ.ಎಂ.ಲಿAಗಪ್ಪ, ಎಚ್.ಎಂ.ರೇವಣ್ಣ, ಕೆಎಂಎಫ್ ಮಾಜಿ ಅಧ್ಯಕ್ಷ ಪಿ.ನಾಗರಾಜು, ಜಿಲ್ಲಾಧಿಕಾರಿ ಯಶ್ವಂತ್ ವಿ ಗುರುಕರ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಸತೀಶ್, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಯರೇಹಳ್ಳಿ ಮಂಜು, ಗ್ಯಾರಂಟಿ ಯೋಜನೆ ತಾಲ್ಲೂಕು ಅಧ್ಯಕ್ಷ ವಿ.ಎಚ್.ರಾಜು, ನಗರಸಭೆ ಉಪಾಧ್ಯಕ್ಷೆ ಗಿರಿಜಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಆರೀಪ್, ಪೌರಾಯುಕ್ತ ಡಾ.ಜಯಣ್ಣ, ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಜಿಲ್ಲಾಧ್ಯಕ್ಷ ಹೆಚ್.ಎಸ್.ಯೋಗಾನಂದ, ತಾಲೂಕು ಅಧ್ಯಕ್ಷ ಶಂಕರಪ್ಪ ಮತ್ತಿತರರು ಉಪಸ್ಥಿತರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು