LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Ramanagara

ಶ್ರೀಶಿವಕುಮಾರ ಸ್ವಾಮೀಜಿ ಮಹಾದ್ವಾರ ನಿರ್ಮಾಣಕ್ಕೆ ಭೂಮಿ ಪೂಜೆ

ರಾಮನಗರ: ಬಿಡದಿ ಪಟ್ಟಣದ ಮುಖ್ಯರಸ್ತೆಯಲ್ಲಿ ಅರಳಿಮರದ ಹತ್ತಿರ ಶ್ರೀ ಶಿವಕುಮಾರ ಸ್ವಾಮೀಜಿ ಹೆಸರಿನ ಮಹಾದ್ವಾರ (ಸ್ವಾಗತ ಕಮಾನು) ನಿರ್ಮಾಣಕ್ಕೆ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಭೂಮಿ ಪೂಜೆ ನೆರವೇರಿಸಿದರು.
ಆನಂತರ ಕನಕಪುರ ತಾಲೂಕು ಮರಳೇಗವಿ ಮಠದ ಶ್ರೀ ಡಾ.ಮುಮ್ಮಡಿ ಶಿವರುದ್ರ ಮಹಾಸ್ವಾಮಿ ಹಾಗೂ ಬಿಡದಿ ಚೌಕಿಮಠದ ಶ್ರೀ ಹುಚ್ಚಪ್ಪ ಮಹಾಸ್ವಾಮಿಗಳೊಂದಿಗೆ ಶ್ರೀ ಸಿದ್ದಲಿಂಗ ಸ್ವಾಮೀಜಿರವರು ಜಾನಪದ ಕಲಾ ತಂಡಗಳ ಮೆರವಣಿಗೆಯೊಂದಿಗೆ ಕಾಲ್ನಡಿಗೆಯಲ್ಲಿ ಬಸವೇಶ್ವರ ಸ್ವಾಮಿ ದೇವಾಲಯ ಹಾಗೂ ಈಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಈ ವೇಳೆ ಶ್ರೀ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಬಿಡದಿಯಲ್ಲಿ ಡಾ.ಶ್ರೀ. ಶಿವಕುಮಾರ ಸ್ವಾಮೀಜಿರವರ ಮಹಾದ್ವಾರದ ಶಂಕುಸ್ಥಾಪನೆಗೆ ಶ್ರದ್ದೆ, ಉತ್ಸಾಹ, ಶ್ರಮ ಎಲ್ಲದಕ್ಕಿಂದ ಮುಖ್ಯವಾಗಿ ಐಕ್ಯತೆಯಿಂದ ಎಲ್ಲಾ ಯುವಕರು ಕೆಲಸ ಮಾಡುತ್ತಿರುವುದು ಸಂತಸ ತಂದಿದೆ. ಈ ಐಕ್ಯತೆಯನ್ನು ಅಳವಡಿಸಿಕೊಂಡು ಅನ್ಯೋನ್ಯವಾಗಿ ಜೀವನ ನಡೆಸಬೇಕು ಎಂದು ಕಿವಿಮಾತು ಹೇಳಿದರು.
ಬಿಜಿಎಸ್ ವೃತ್ತದಲ್ಲಿ ಆದಿಚುಚನಗಿರಿ ಕ್ಷೇತ್ರದ ಜಗದ್ಗುರು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳ ಮಹಾದ್ವಾರವಿದೆ. ಈಗ ಇದರ ಸಮೀಪದಲ್ಲಿಯೇ ಡಾ.ಶ್ರೀ ಶಿವಕುಮಾರ ಸ್ವಾಮೀಜಿರವರ ಮಹಾದ್ವಾರ ನಿರ್ಮಾಣ ಮಾಡುತ್ತಿರುವುದು ಸಂತಸ ಮೂಡಿಸಿದೆ. ಇನ್ನೊಂದು ವರ್ಷದಲ್ಲಿ ಈ ಮಹಾದ್ವಾರದ ಕೆಲಸ ಮುಗಿಯಬೇಕು. ಇದನ್ನು ಸವಾಲು ಎಂದು ಭಾವಿಸಿ ಕೆಲಸ ಮಾಡಬೇಕು ತಿಳಿಸಿದರು.
ದೂರದೃಷ್ಟಿಯುಳ್ಳ ಮೈಸೂರು ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಪ್ರಯಾಣ ಮಾಡುವಾಗ ಇದೇ ಗ್ರಾಮದಲ್ಲಿ ವಿಶ್ರಾಂತಿಯನ್ನು ಪಡೆದು ಹೋಗುತ್ತಿದ್ದರಂತೆ. ಅಂತಹ ವಿಶೇಷ ಮಹತ್ವ ಪಡೆದ ಗ್ರಾಮ ಇದಾಗಿದೆ. ಮೈಸೂರು ಮಹಾರಾಜರು ಶಿಕ್ಷಣ, ಆರೋಗ್ಯ, ಕೃಷಿ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿನ ಸಮಾಜಪರ ಕಾರ್ಯಗಳನ್ನು ನಾವುಗಳು ಮರೆಯುವಂತಿಲ್ಲ ಎಂದು ಶ್ರೀಗಳು ಹೇಳಿದರು.
ಮೂರು ತಿಂಗಳೊಳಗೆ ಮಹಾದ್ವಾರ ನಿರ್ಮಾಣ: ಪುರಸಭೆ ಸದಸ್ಯ ಬಿ. ಜೆ.ಲೋಹಿತ್ ಕುಮಾರ್ ಮಾತನಾಡಿ, ಶ್ರೀ ಶಿವಕುಮಾರ ಸ್ವಾಮೀಜಿಗಳ ಮಹಾದ್ವಾರ ನಿರ್ಮಾಣ ಭೂಮಿ ಪೂಜಾ ಕಾರ್ಯಕ್ಕೆ ಜನರು ಪಕ್ಷಾತೀತ, ಜಾತ್ಯತೀತವಾಗಿ ಬೆಂಬಲ ನೀಡಿದ್ದಾರೆ. ಮುಂದಿನ ಮೂರು ತಿಂಗೊಳೊಳಗೆ ಮಹಾದ್ವಾರ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಹೇಳಿದರು.
ಈಗಾಗಲೇ ಬಿಡದಿಯ ಮುಖ್ಯರಸ್ತೆಗೆ ಶ್ರೀ ಶಿವಕುಮಾರಸ್ವಾಮೀಜಿ ಹೆಸರನ್ನು ನಾಮಕರಣ ಮಾಡಲಾಗಿದೆ. ಇದೀಗ ಶ್ರೀಗಳ ಹೆಸರಿನಲ್ಲಿ ಮಹಾದ್ವಾರ ನಿರ್ಮಾಣಕ್ಕೆ ಪುರಸಭೆಯಲ್ಲಿ 20 ಲಕ್ಷ ಅನುದಾನ ಮೀಸಲಿಡಲಾಗಿದೆ. ಮಹಾದ್ವಾರ ನಿರ್ಮಾಣಕ್ಕೆ ಹೆಚ್ಚುವರಿ ಹಣ ತಗುಲಿದರೆ ಮುಖಂಡರೆಲ್ಲರು ಸೇರಿ ಭರಿಸುವುದಾಗಿ ತಿಳಿಸಿದರು.
ಮಹಾದ್ವಾರ ಭೂಮಿ ಪೂಜೆ ಹಾಗೂ ಶ್ರೀ ಶಿವಕುಮಾರ ಸ್ವಾಮೀಜಿಗಳ 119ನೇ ಜಯಂತೋತ್ಸವ ಪ್ರಯುಕ್ತ ಬಿಜಿಎಸ್ ವೃತ್ತದಲ್ಲಿ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ವೀರಶೈವ ಮುಖಂಡ ಹೋಟೆಲ್ ಶಶಿ, ಪುರಸಭೆ ಮಾಜಿ ಅಧ್ಯಕ್ಷ ಹರಿ ಪ್ರಸಾದ್, ಸದಸ್ಯ ಸೋಮಶೇಖರ್, ರಾಕೇಶ್, ಮುಖಂಡರಾದ ಖಲೀಲ್, ನರಸಿಂಹಯ್ಯ, ರೇಣುಕಪ್ಪ, ಬಿ. ಎಂ. ರಮೇಶ್ ಕುಮಾರ್, ಕುಮಾರ್, ಬಾಲಾಜಿ, ನಿತ್ಯಾನಂದ, ರಾಮು ಮತ್ತಿತರರು ಹಾಜರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು