LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Ramanagara

ಚಂದ್ರಮ್ಮ ಕೆಂಪೇಗೌಡರನ್ನು ಬೀದಿಗೆ ನಿಲ್ಲಿಸಿದ್ದೀರಲ್ವಾ ಮಂಜಣ್ಣ: ಹೆಚ್.ಸಿ.ಬಾಲಕೃಷ್ಣ

ಮಾಗಡಿ: ಕಳೆದ ಬಮೂಲ್ ಚುನಾವಣೆಯಲ್ಲಿ ನನ್ನ ಸಹೋದರ ಹೆಚ್.ಎನ್.ಅಶೋಕ್ ವಿರುದ್ದ ಹುಚ್ಚಹನುಮೇಗೌಡರಪಾಳ್ಯದ ಚಂದ್ರಮ್ಮ ಕೆಂಪೇಗೌಡರನ್ನು ಸ್ಪರ್ಧಿಸುವಂತೆ ಪುಸಲಾಯಿಸಿ ಅವರನ್ನು ಬೀದಿಗೆ ನಿಲ್ಲಿಸಿದ್ದೀರಲ್ಲವೇ ಮಂಜಣ್ಣ ಎಂದು ಮಾಜಿ ಶಾಸಕರಾದ ಎ.ಮಂಜುನಾಥ್ ವಿರುದ್ದ ಕೆ.ಆರ್.ಡಿ.ಸಿ.ಎಲ್ ಅದ್ಯಕ್ಷರು ಶಾಸಕರಾದ ಹೆಚ್.ಸಿ.ಬಾಲಕೃಷ್ಣ ಹರಿಹಾಯ್ದರು.
ತಾಲ್ಲೂಕಿನ ಸೀಗೇಕುಪ್ಪೆ ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು ೮ ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಾಜಿ ಶಾಸಕ ಎ.ಮಂಜುನಾಥ್ ಅವರು ತಮ್ಮ ಕಾರ್ಯಕರ್ತರನ್ನು ಕೇವಲ ನೆಪಮಾತ್ರಕ್ಕೆ ಸಹಕಾರಿ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಿ ಮತಯಾಚಿಸದೇ ಅರ್ಧದಲ್ಲೇ ಕೈಬಿಟ್ಟು ಹೋಗುವ ಪರಿಪಾಠದವರಾಗಿದ್ದಾರೆ.ಇತ್ತೀಚೆಗೆ ನಡೆದ ಬಮೂಲ್ ಚುನಾವಣೆಯಲ್ಲಿ ನನ್ನ ಸಹೋದರ ಹೆಚ್.ಎನ್.ಅಶೋಕ್ ಅವರ ವಿರುದ್ದ ಚಂದ್ರಮ್ಮರನ್ನು ನಿಲ್ಲಿಸಿ ಗಟ್ಟಿಯಾಗಿ ನಿಂತು ಚುನಾವಣೆ ಮಾಡದೇ ಅವರನ್ನು ಬೀದಿಗೆ ನಿಲ್ಲಿಸಿದ್ದರು.ನಾವು ಹುಚ್ಚಹನುಮೇಗೌಡರಪಾಳ್ಯದ ಡೈರಿ ಚುನಾವಣೆಗೆ ಸ್ಪರ್ಧಿಸುತ್ತಿರಲಿಲ್ಲ.ಇದೀಗ ನಮ್ಮ ಬೆಂಬಲಿತ ಅರ್ಧದಷ್ಟು ಮಂದಿ ನಿರ್ದೇಶಕರು ಆಯ್ಕೆಯಾಗಿದ್ದಾರೆ.ಇದು ಎ.ಮಂಜುನಾಥ್ ಅವರ ನಿರ್ಲಕ್ಷ÷್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಬಾಲಕೃಷ್ಣ ತಿಳಿಸಿದರು.
ಬಾಕ್ಸ್..೨೦೧೮ ರ ಚುನಾವಣೆ ಸಂದರ್ಭದಲ್ಲಿ ನಾನು ಮತ್ತು ನನ್ನ ಸಹೋದರ ವಿಎಸ್‌ಎಸ್‌ಎನ್ ಗಳಿಂದ ಹಣ ತೆಗೆದುಕೊಂಡು ಚುನಾವಣೆಗೆ ಬಳಸಿಕೊಳ್ಳುತ್ತಿದ್ದೇವೆ ಎಂದು ಹೇಳಿಕೆ ನೀಡಿದ್ದರು.ನಾವಾಗಲಿ ನಮ್ಮ ಕುಟುಂಬವಾಗಲಿ ನಮ್ಮ ಜೇಬಿನಿಂದ ಹಣ ಖರ್ಚು ಮಾಡಿದ್ದೇವೆಯೇ ಹೊರತು ಒಂದೇ ಒಂದು ರೂ ಹಣ ದುರುಪಯೋಗಪಡಿಸಿಕೊಂಡಿಲ್ಲ.ಹೆಚ್.ಎನ್.ಅಶೋಕ್ ಅವರ ಸೇವೆಯ “ಸಾಕ್ಷಿಗುಡ್ಡೆಯನ್ನು”ಯಾರು ಬೇಕಾದರೂ ಪರೀಕ್ಷಿಸಿಕೊಳ್ಳಬಹುದು..ಹೆಚ್.ಸಿ.ಬಾಲಕೃಷ್ಣ ಶಾಸಕರು.
ಇದೇ ತಿಂಗಳು ೨೨ ನೇ ತಾರೀಖಿನಂದು ಚಕ್ರಬಾವಿ ವಿಎಸ್‌ಎಸ್‌ಎನ್ ನಲ್ಲಿ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ.ಇಲ್ಲಿಯೂ ಸಹ ನಾವು ಚುನಾವಣೆ ನಡೆಯುವುದು ಬೇಡ ಎಂದು ಹೇಳಿದ್ದರು ಸಹ ಅವರ ಬೆಂಬಲಿತ ಅಭ್ಯರ್ಥಿಗಳನ್ನು ನಿಲ್ಲಿಸಿದ್ದಾರೆ.ಈ ಸಂದರ್ಭದಲ್ಲಿ ಮಹದೇಶ್ವರಸ್ವಾಮಿಗೆ ಪೂಜೆ ಸಲ್ಲಿಸಿದ ನಂತರ ನಾವು ಚಕ್ರಬಾವಿ ವಿಎಸ್‌ಎಸ್‌ಎನ್ ಸಂಘವನ್ನು ಹುಲೀಕಟ್ಟೆ ಮನೆತನದವರು “ಕಬ್ಜ”ಮಾಡಿಕೊಂಡಿದ್ದಾರೆ ಎಂಬ ಹೇಳಿಕೆ ನೀಡಿದ್ದಾರೆ.
ನಾವು ೨೦೧೮ ರಲ್ಲಿ ಅವರು ವಿರುದ್ದ ೫೨ ಸಾವಿರ ಮತಗಳ ಅಂತರದಿAದ ಸೋಲನುಭವಿಸಿದ್ದೆ.ಆಗ ಅವರು ಶಾಸಕರಾಗಿದ್ದರಲ್ಲಾ ಅವರು ಏಕೆ “ಕಬ್ಜ”ಮಾಡಿಕೊಳ್ಳಲಿಲ್ಲ.ನಮ್ಮನ್ನು ಮತ್ತೆ ಏಕೆ ಈ ಕ್ಷೇತ್ರದ ಜನರು ಶಾಸಕರನ್ನಾಗಿ ಪುನರಾಯ್ಕೆ ಮಾಡಿಕೊಂಡರು ಎಂದು ಅವರೇ ಹೇಳಬೇಕು.ಜನರು ದಡ್ಡರಲ್ಲ.ಕಬ್ಜ ಎಂದರೆ ನಾವೇನು ಚಾಕು ಹಿಡಿದುಕೊಂಡು ಬೆದರಿಕೆ ಹಾಕುತ್ತಿದ್ದೇವೆಯೇ.ಕಬ್ಜ ಎಂಬುದನ್ನು ಬಿಟ್ಟು ನೇರಾನೇರ ಚುನಾವಣೆ ಎದುರಿಸಬೇಕು,ಸುಖಾಸುಮ್ಮನೆ ನೆಪಮಾತ್ರಕ್ಕೆ ತಮ್ಮ ಪಕ್ಷದ ಕಾರ್ಯಕರ್ತರನ್ನು ಚುನಾವಣೆಗೆ ಸ್ಪರ್ಧಿಸಿ ಓಡಿ ಹೋಗುವುದನ್ನು ಮಾಜಿ ಶಾಸಕರು ಬಿಡಬೇಕು ಎಂದು ಬಾಲಕೃಷ್ಣ ಟಾಂಗ್ ನೀಡಿದರು.
ಕಾಂಗ್ರೆಸ್ ಮುಖಂಡರಾದ ಆಗಲಕೋಟೆ ನರಸಿಂಹಮೂರ್ತಿ, ಜೆ.ಪಿ.ಚಂದ್ರೇಗೌಡ, ಅರಳ ಕುಪ್ಪೆ ಕಾಂತರಾಜು, ಬಿ.ಟಿ.ವೆಂಕಟೇಶ್, ಕೋರಮಂಗಲ ಶ್ರೀನಿವಾಸ್, ಸೀಗೇಕುಪ್ಪೆ ಲೋಕೇಶ್, ಬೆಳಗವಾಡಿ ರಂಗನಾಥ್, ಮತ್ತೀಕೆರೆ ರಾಜು, ಆನಂದ್ ಸೇರಿದಂತೆ ಮತ್ತಿತರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು