LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Ramanagara

`ರೈತರನ್ನು ದಲ್ಲಾಳಿಗಳು ಎಂದು ಹೇಳಿರುವ ನಿಖಿಲ್ ಕುಮಾರಸ್ವಾಮಿ ಕ್ಷಮೆಯಾಚಿಸಬೇಕು’

ರಾಮನಗರ: ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಬಳಿ ನಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಹೋಗಿದ್ದ ರೈತರ ಬಗ್ಗೆ ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಅಲ್ಲಿದ್ದವರು ರೈತರಲ್ಲ ದಲ್ಲಾಳಿಗಳು ಎಂದಿದ್ದಾರೆ. ಅವರ ಮುಖಗಳನ್ನು ನೋಡಿದ್ದೀರಾ ಎಂದು ಹೀಯಾಳಿಸಿದ್ದಾರೆ ಎಂದು ರೈತ ಮುಖಂಡ ಹೊಸೂರು ರಾಜಣ್ಣ ಆಕ್ರೋಶ ಹೊರಹಾಕಿದರು.ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಡಿಸಿಎಂ ಅವರ ಬಳಿ ಚರ್ಚಿಸಲು ಹೋದವರೆಲ್ಲರ ಫೋಟೋಗಳು, ಹೆಸರುಗಳು ನಮ್ಮ ಬಳಿ ಇದೆ. ನಿಖಿಲ್ ಅವರು ನಮ್ಮ ಹಳ್ಳಿಗೆ ಬರಲಿ ಎಲ್ಲರ ಜಮೀನು, ಪಹಣಿ ತೋರಿಸುತ್ತೇವೆ, ತದನಂತರ ನಾವೆಲ್ಲ ರೈತರೋ, ದಲ್ಲಾಳಿಗಳೋ ಎಂಬುದನ್ನು ತಿಳಿದುಕೊಳ್ಳಲಿ ಎಂದು ಸವಾಲು ಹಾಕಿದರು.  ಬಿಡದಿ ಹೋಬಳಿಯಲ್ಲಿ ಉದ್ದೇಶಿತ ಎಐ ಸಿಟಿ ಬಗ್ಗೆ ನಿಖಿಲ್ ಮಾತನಾಡಿದ್ದಾರೆ, 10 ಕುಂಟೆ, 15 ಕುಂಟೆ ರೈತರ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ. 2006-07ರಲ್ಲಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳಾಗಿದ್ದ ವೇಳೆ ಬಿಡದಿ ಟೌನ್‌ಶಿಪ್ ನಿರ್ಮಿಸಲು ಪ್ರಸ್ತಾಪವಾಗಿತ್ತು. ಆಗ ಈ ರೈತರು ಕಾಣಿಸಲಿಲ್ಲವೇ, ದನ, ಕುರಿ, ಗೊಬ್ಬರ, ಕೊಟ್ಟಿಗೆ ಕಾಣಿಸಲಿಲ್ಲವೇ ಎಂದು ತರಾಟೆಗೆ ತೆಗೆದುಕೊಂಡರು. ಬಿಡದಿ ಟೌನ್‌ಶಿಪ್ ಯೋಜನೆ ಜಾರಿಗೆ ತನ್ನಿ ಅಂತ ಈ ಭಾಗದ ಜನ ಯಾರು ಕೇಳಿರಲಿಲ್ಲ. ಈ ವಿಚಾರದಲ್ಲಿ ಪ್ರತಿಭಟನೆ ನಂತರ ಕುಮಾರಸ್ವಾಮಿಯವರು ರೈತರನ್ನು ವಿಧಾನಸೌಧಕ್ಕೆ ಆಹ್ವಾನಿಸಿದ್ದರು. ಅನೇಕ ಭರವಸೆಗಳನ್ನು ಕೊಟ್ಟ ನಂತರ ರೈತರು ಯೋಜನೆಗೆ ಒಪ್ಪಿಗೆ ಸೂಚಿಸಿ ಬಂದಿದ್ದರು. ಅದಾದ ನಂತರ ಡಿಎಲ್‌ಎಫ್ ಸಂಸ್ಥೆಗೆ ಗುತ್ತಿಗೆ ಕೊಟ್ಟರು, 400 ಕೋಟಿ ರೂ ಕೊಟ್ಟರು. ಆದರೆ ಕ್ಯಾಬಿನೆಟ್ ಸಭೆ ನಡೆಸದೆ ತೆಗೆದುಕೊಂಡ ತೀರ್ಮಾನವಿದು. ದಲ್ಲಾಳಿ ವ್ಯಾಪಾರ ಮಾಡಿದ್ದು ಯಾರು ಎಂದು ನಿಖಿಲ್ ಅವರನ್ನು ರಾಜಣ್ಣ ಪ್ರಶ್ನಿಸಿದರು.   ಬಿಡದಿ ಎಐ ಸಿಟಿ ಬಗ್ಗೆ ದೇವೇಗೌಡರಿಗೆ ಸುಳ್ಳು ಮಾಹಿತಿ ಕೊಟ್ಟೀದ್ದೀರಿ ಎಂದು ಕುಮಾರಸ್ವಾಮಿಯವರನ್ನು ತರಾಟೆಗೆ ತೆಗೆದುಕೊಂಡ ರಾಜಣ್ಣ, ಇದು ಯಾರ ಪ್ರಾಜೆಕ್ಟ್ ಇದು ಅಂತ ದೊಡ್ಡಗೌಡರಿಗೆ ಹೇಳಿ, ಈ ಪ್ರಾಜೆಕ್ಟ್ ನಾವು ಕೇಳಿದ್ದೆವಾ? ನೀವು ಹುಟ್ಟು ಹಾಕಿದ ಪ್ರಾಜೆಕ್ಟ್ ಇದು, ಆದರೂ ಈಗ ರಾಜಕೀಯಕ್ಕಾಗಿ ರೈತರ ನಡುವೆಯೇ ಕಿತಾಪತಿ ಸೃಷ್ಟಿಸುತ್ತಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಡದಿ ಟೌನ್‌ಶಿಪ್ ಯೋಜನೆ ತಾವು ಕೈಬಿಟ್ಟಿರುವುದಾಗಿ ಸುಳ್ಳು ಹೇಳಿದ್ದೀರಿ. 2019ರಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಈ ಯೋಜನೆಯನ್ನು ರದ್ದು ಮಾಡಬಹುದಿತ್ತು. ಆದರೆ ಮಾಡಲಿಲ್ಲ, ಈಗ ಕೈಬಿಟ್ಟಿದ್ದೆ ಅಂತು ಸುಳ್ಲು ಹೇಳುವುದು ಸರಿಯಲ್ಲ ಎಂದರು.ರೈತರನ್ನು ದಲ್ಲಾಳಿಗಳು ಎಂದು ಹೇಳಿರುವುದಕ್ಕೆ ನಿಖಿಲ್ ಕ್ಷಮೆ ಯಾಚಿಸಬೇಕು, ಇಲ್ಲದಿದ್ದರೆ ನಾವು ಹೋರಾಟದ ಹಾದಿ ಹಿಡಿಯುತ್ತೇವೆ ಎಂದು ಎಚ್ಚರಿಸಿದರು.ಈ ವೇಳೆ ಪ್ರಮುಖರಾದ ಸಿದ್ದರಾಜು, ಕೃಷ್ಣಮೂರ್ತಿ, ಮುನಿರಾಜು, ಎಚ್.ಎಂ.ನಾಗರಾಜು, ಶಿವರಾಂ, ಗುರುಸ್ವಾಮಿ, ಮಹೇಂದ್ರ, ಶಿವಕುಮಾರ್, ನರಸಿಂಹರಾಜು ಮುಂತಾದವರು ಹಾಜರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು