LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Belagavi

ಸಕ್ಕರೆ ಸಂಧಾನ

ಉತ್ಪಾದಕರು ಹಾಗೂ ಕಬ್ಬು ಬೆಳೆಗಾರರೊಂದಿಗೆ ಸಿಎಂ ಸಮಾಲೋಚನೆ ಸಭೆ


ಬೆಳಗಾವಿ: ಸಕ್ಕರೆ ಉತ್ಪಾದಕರು ಹಾಗೂ ಕಬ್ಬು ಬೆಳೆಗಾರರೊಂದಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಂದು ಸಭೆ ನಡೆಸಿದ್ದಾರೆ.ಸಕ್ಕರೆ ಉತ್ಪಾದಕರು ಮತ್ತು ಕಬ್ಬು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಆಲಿಸಲು ಮತ್ತು ಅವುಗಳ ನಿವಾರಣೆ ಸಂಬಂಧ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಯಲಿದ್ದಾರೆ.ಬೆಳಗಾವಿಯ ಸುವರ್ಣ ಸೌಧದಲ್ಲಿ ಇಂದು ಬೆಳಿಗ್ಗೆ 11 ಗಂಟೆಗೆ ಸಕ್ಕರೆ ಕಾರ್ಖಾನೆ ಮಾಲಿಕರ ಸಭೆ ನಡೆದಿದೆ. ಸುಮಾರು 81 ಸಕ್ಕರೆ ಕಾರ್ಖಾನೆ ಮಾಲೀಕರು ಈ ಸಭೆಯಲ್ಲಿ ಭಾಗವಹಿಸಿದ್ದಾರೆ. ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರು ಸಹ ಈ ಸಭೆಯಲ್ಲಿ ಹಾಜರಿದ್ದಾರೆ.ಕಬ್ಬು ಬೆಳೆಗಾರರಿಗೆ ಕಾರ್ಖಾನೆ ಮಾಲೀಕರಿಂದ ದೊರಕುತ್ತಿರುವ ಸೌಲಭ್ಯಗಳು ಮತ್ತು ಸಾಧಕ-ಬಾಧಕಗಳ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಯಲಿದೆ.ಈ ಸಭೆಯ ನಂತರ ಮಧ್ಯಾಹ್ನ 3.30 ಕ್ಕೆ ಸುವರ್ಣ ಸೌಧದಲ್ಲಿಯೇ ರಾಜ್ಯ ಕಬ್ಬು ಬೆಳೆಗಾರರೊಂದಿಗೆ ಮುಖ್ಯಮಂತ್ರಿಯವರು ಸಭೆ ನಡೆಸಲಿದ್ದಾರೆ.ಪ್ರತಿಯೊಂದು ಜಿಲ್ಲೆಯಿಂದ ಜಿಲ್ಲಾಧಿಕಾರಿ ಸೂಚಿಸುವ ರೈತರು ಈ ಸಭೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ. ಉಳಿದ ರೈತರಿಗೆ ಸಭೆ ವೀಕ್ಷಿಸಲು ದೊಡ್ಡ ಪರದೆಯ ವ್ಯವಸ್ಥೆ ಮಾಡಲಾಗಿದ್ದು, ಅವರಿಗೆ ಸುವರ್ಣ ಸೌಧದ ಪಕ್ಕದಲ್ಲಿಯೇ ಇರುವ ಸೈನ್ಸ್ ಪಾರ್ಕ್ನಲ್ಲಿ ಅವಕಾಶ ಕಲ್ಪಿಸಲಾಗಿದೆ.
ಕಬ್ಬು ಬೆಳೆಗಾರರಿಗೆ ಪ್ರತಿ ಟನ್ ಕಬ್ಬಿಗೆ 5,500 ದರ ನಿಗದಿ, ಟನ್‌ವೊಂದಕ್ಕೆ ಸಾವಿರ ರೂಪಾಯಿ ಪ್ರೋತ್ಸಾಹ ಧನ, ಎಂಎಸ್‌ಪಿ ನಿಗದಿ ಸೇರಿದಂತೆ ತೂಕ ಯಂತ್ರವನ್ನು ಅಳವಡಿಸುವುದಕ್ಕೆ 500 ಕೋಟಿ ರೂಪಾಯಿ ನೀಡುವುದು ರೈತರ ಪ್ರಮುಖ ಬೇಡಿಕೆಯಾಗಿದೆ. 
ಸಭೆಗೂ ಮುನ್ನ ಮಾತನಾಡಿರುವ ಮುಖ್ಯಮಂತ್ರಿಯವರು ತಾವು ಬೆಳೆಗಾರರ ಮತ್ತು ಸಕ್ಕರೆ ಉತ್ಪಾದಕರ ಸಭೆ ಕರೆದಿರುವುದು ಅವರ ಸಮಸ್ಯೆ ತಿಳಿಯಲೆಂದೇ ಎಂದು ತಿಳಿಸಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST