LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Ramanagara

ಯೋಜನಾ ಪ್ರಾಧಿಕಾರಕ್ಕೆ ತಟವಾಳ್ ಪ್ರಕಾಶ್ ಅಧ್ಯಕ್ಷರಾಗಿ ನೇಮಕ

ಮಾಗಡಿ: ಹಾಲಿ ಜಮಾಲಸಾಬರಪಾಳ್ಯ ವಾರ್ಡಿನ ಗ್ರಾಪಂ ಸದಸ್ಯರು ತಾಪಂ ಕೆಡಿಪಿ ಸದಸ್ಯರಾದ ತಟವಾಳ್ ಪ್ರಕಾಶ್ ಮಾಗಡಿ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದರೆ ಕಾಗಿಮಡು ದೀಪಕ್ ಪಟ್ಟಣದ ಬಿ.ಎನ್.ಚಂದ್ರಶೇಖರ್ ಕಲ್ಯಾಗೇಟ್ ಆರ್.ಕೃಷ್ಣಪ್ಪ ಅವರುಗಳನ್ನು ಸರ್ಕಾರವು ನೇಮಕ ಮಾಡಿ ಆದೇಶಿಸಿರುವ ಹಿನ್ನೆಲೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಅಧಿಕಾರ ಸ್ವೀಕರಿಸಿದರು.
ನೂತನ ಅದ್ಯಕ್ಷ ತಟವಾಳ್ ಪ್ರಕಾಶ್ ಮಾತನಾಡಿ ಇಡೀ ರಾಜ್ಯದ ೨೨೪ ಕ್ಷೇತ್ರಗಳಲ್ಲಿ ಯಾರಾದರೂ ಶಾಸಕರು ಕಟ್ಟಕಡೆಯ ಸಾಮಾನ್ಯ ಕಾರ್ಯಕರ್ತನಿಗೆ ರಾಜಕೀಯ ಸ್ಥಾನಮಾನ ನೀಡುತ್ತಾರೆ ಎಂದರೆ ಅದು ಹೆಚ್.ಸಿ.ಬಾಲಕೃಷ್ಣರವರು ಮೊದಲನೇ ಸಾಲಿಗೆ ನಿಲ್ಲುತ್ತಾರೆ.ನಾನು ಯೋಜನಾ ಪ್ರಾಧಿಕಾರದ ಅಧ್ಯಕ್ಷನಾಗುತ್ತೇನೆ ಎಂದು ಕನಸಿನಲ್ಲಿಯೂ ಎಣಿಸಿರಲಿಲ್ಲ.ಹಿಂದುಳಿದ ದಲಿತ ಸಾಮಾನ್ಯ ಕುಟುಂಬದ ಹಿನ್ನೆಲೆಯಿಂದ ಬಂದಿರುವ ನನ್ನನ್ನು ಗುರುತಿಸಿ ಇಂದು ಅಧ್ಯಕ್ಷನನ್ನಾಗಿ ಮಾಡಿರುವುದಕ್ಕೆ ಶಾಸಕ ಬಾಲಕೃಷ್ಣ ಬಮೂಲ್ ಅದ್ಯಕ್ಷ ಡಿ.ಕೆ.ಸುರೇಶ್ ಬಿಡಿಸಿಸಿ ಬ್ಯಾಂಕ್ ಅದ್ಯಕ್ಷ ಹೆಚ್.ಎನ್.ಅಶೋಕ್ ಅವರಿಗೆ ಅಭಾರಿಯಾಗಿರುತ್ತೇನೆ.ಸರಕಾರದ ಅನುದಾನಗಳನ್ನು ಸದ್ಬಳಕೆ ಮಾಡಿಕೊ ಳ್ಳಲಾಗುವುದು ಎಂದು ಪ್ರಕಾಶ್ ತಿಳಿಸಿದರು.
ಸದಸ್ಯರಾದ ಬಿ.ಎನ್.ಚಂದ್ರಶೇಖರ್ ಮಾತನಾಡಿ ಕಳೆದ ರಾತ್ರಿಯಲ್ಲಿ ನಾನು ಯೋಜನಾ ಪ್ರಾಧಿಕಾರದ ಅಧ್ಯಕ್ಷನಾಗಿ ನೇಮಕವಾಗಿದ್ದೇನೆ ಎಂಬ ಮಾಹಿತಿ ಬಂದಾಗ ನನಗೆ ನಂಬಲಿಕ್ಕೆ ಸಾದ್ಯವಾಗಲಿಲ್ಲ.ಈ ಹಿಂದೆ ಶಾಸಕರಾದ ಬಾಲಕೃಷ್ಣರವರು ನನ್ನನ್ನು ಪುರಸಭಾ ಸದಸ್ಯನನ್ನಾಗಿ ಮಾಡಿದ್ದರು.ಇಂದು ಯೋಜನಾ ಪ್ರಾಧಿಕಾರದ ಅಧ್ಯಕ್ಷನಾಗಲು ಶಾಸಕರು ಮತ್ತು ಎಂ.ಆರ್.ಮAಜುನಾಥ್ ಡೂಂಲೈಟ್ ನರಸಿಂಹಮೂರ್ತಿ ಹಾಗೂ ಪಕ್ಷದ ಕಾರ್ಯಕರ್ತರು ಕಾರಣೀಭೂತರಾಗಿದ್ದಾರೆ. ನನಗೆ ಇದು ಹುದ್ದೆಯಲ್ಲಾ ಜವಾಬ್ದಾರಿಯಾಗಿದೆ ಅದಕ್ಕೆ ನ್ಯಾಯ ಒದಗಿಸಲಾಗುವುದು ಎಂದರು.
ಮತ್ತೋರ್ವ ಸದಸ್ಯ ಆರ್.ಕೃಷ್ಣಪ್ಪ ಮಾನ್ಯ ಶಾಸಕರು ಹಿಂದುಳಿದ ವರ್ಗಕ್ಕೆ ರಾಜಕೀಯ ಸ್ಥಾನಮಾನ ನೀಡಲು ನನ್ನನ್ನು ಗುರುತಿಸಿ ಈ ಸ್ಥಾನಮಾನ ನೀಡಿದ್ದಾರೆ. ಈ ಹಿಂದೆ ನನ್ನ ಸಹೋದರರಾದ ಚಿಲಿಪಿಲಿ ರಾಜಣ್ಣ ಅವರನ್ನು ಪುರಸಭೆಗೆ ಸ್ಥಾಯಿಸಮಿತಿ ಅದ್ಯಕ್ಷರನ್ನಾಗಿ ಮಾಡಿದ್ದರು.ಇದೀಗ ನನ್ನನ್ನು ಯೋ.ಪ್ರಾಧಿಕಾರದ ಸದಸ್ಯನನ್ನಾಗಿಸಿದ್ದಾರೆ.ಅವರು ನಮ್ಮಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ ಎಂದು ಕೃಷ್ಣಪ್ಪ ಸ್ಪಷ್ಟಪಡಿಸಿದರು.
ಬಮೂಲ್ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಯೋಜನಾ ಪ್ರಾಧಿಕಾರದ ಮಾಜಿ ಅಧÀ್ಯಕ್ಷ ಕೆಂಚೇಗೌಡ, ಟಿಎಪಿಸಿಎಂಎಸ್ ನಿರ್ದೇಶಕ ಕಲ್ಯಾಗೇಟ್ ಮಂಜುನಾಥ್, ತಾಪಂ ಮಾಜಿ ಸ್ಥಾಯಿಸಮಿತಿ ಅದ್ಯಕ್ಷ ಧನಂಜಯನಾಯಕ್,ಚಿಗಳೂರು ಗಂಗಾಧರ್, ಕೋರಮಂಗಲ ಶ್ರೀನಿವಾಸ್, ಪುರಸಭಾ ಮಾಜಿ ಸದಸ್ಯರಾದ ಡೂಂಲೈಟ್ ನರಸಿಂಹಮೂರ್ತಿ, ಹೊಸಪೇಟೆ ಅಶ್ವಥ್, ರಾಮಣ್ಣ, ಕಲ್ಯಾಗೇಟ್ ಶಾಂತಕುಮಾರ್, ನಾಮಿನಿ ಸದಸ್ಯ ಕಬಡ್ಡಿ ಪ್ರಕಾಶ್, ದೊಡ್ಡಿ ಲೋಕೇಶ್ ಹಳ್ಳಿಕಾರ್ ಹನುಮಂತರಾಜು, ಮಾಡಬಾಳ್ ಆನಂದ್ ಸೇರಿದಂತೆ ಮತ್ತಿತರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು