ಐಪಿಎಲ್ 2026ರಲ್ಲಿ ಅತಿ ಹೆಚ್ಚು ರನ್ ಕಲೆ ಹಾಕಿ ಆರೆಂಜ್ ಕ್ಯಾಪ್ ಗೌರವಕ್ಕೆ ಭಾಜನರಾದ ವೈಭವ್ ಸೂರ್ಯವಂಶಿ.(ಗ್ಯಾಲರಿ- TOI.in)
ಐಪಿಎಲ್ 2026ರ ಫೈನಲ್ ನಲ್ಲಿ ಅನುಭವಿ ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಅವರು ಆರ್ ಸಿಬಿ ವಿರುದ್ಧ ಬೇಗನೇ ಔಟಾಗಿ ನಿರ್ಗಮಿಸುವುದರೊಂದಿಗೆ ವೈಭವ್ ಸೂರ್ಯವಂಶಿಗೆ ಆರೆಂಜ್ ಕ್ಯಾಪ್ ಪಕ್ಕಾ ಆಗಿದೆ. ಈ ಬಾರಿ ಟೂರ್ನಿಯುದ್ದಕ್ಕೂ ತಮ್ಮ ಸ್ಫೋಟಕ ಮತ್ತು ಸ್ಥಿರ ಬ್ಯಾಟಿಂಗ್ ಪ್ರದರ್ಶನದಿಂದ ಕ್ರಿಕೆಟ್ ಜಗತ್ತನ್ನು ಮಂತ್ರಮುಗ್ಧಗೊಳಿಸಿದ ಅವರು ಒಟ್ಟು 776 ರನ್ ಗಳಿಸಿ ಅಗ್ರಸ್ಥಾನ ಪಡೆದಿದ್ದಾರೆ. ಹೀಗಾಗಿ ಸೀಸನ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಿಗೆ ನೀಡಲಾಗುವ ಪ್ರತಿಷ್ಠಿತ ‘ಆರೆಂಜ್ ಕ್ಯಾಪ್’ (Orange Cap) ಅನ್ನು ತಮ್ಮದಾಗಿಸಿಕೊಳ್ಳುವ ಮೂಲಕ 15ರ ಹರೆಯದ ಬಾಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ವೈಭವ್ ಸೂರ್ಯವಂಶಿ ಪಾಲಾದ ಆರೆಂಜ್ ಕ್ಯಾಪ್!



