LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Feature Article

ಅಂತಾರಾಷ್ಟ್ರೀಯ ಅಜನಿತ ಮಕ್ಕಳ ದಿನ

ಇಂತಹ ಒಂದು ದಿನದ ಆಚರಣೆ ಅವಶ್ಯಕತೆ ಏನು ಎಂಬ ವಿಷಯ ಎಲ್ಲರ ಮನಸ್ಸಿಗೂ ಬರಬಹುದು ಇತ್ತೀಚಿಗೆ ಹೆಚ್ಚುತ್ತಿರುವ ಭ್ರೂಣ ಹತ್ಯೆಯ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ನಡೆಯುತ್ತಿರುವ ಭ್ರೂಣ ಹತ್ಯೆಗಳನ್ನು ವಿರೋಧಿಸುವ ಸಲುವಾಗಿ ಅಜನಿತ ಮಕ್ಕಳ ದಿನವನ್ನಾಗಿ ಆಚರಿಸಲು ಆರಂಭಿಸಿದರು ಮಾರ್ಚ ತಿಂಗಳ 25ನೇ ತಾರೀಖಿನಂದು ಈ ದಿನವನ್ನು ಆಚರಿಸಲಾಗುತ್ತದೆ.

ಈ ವಿಚಾರದ ಬಗೆಗೆ ಪೋಪ್ ಜಾನ್ ಪಾಲ್‍ರವರು ಮಾತನಾಡಿದ್ದರು ಅದಕ್ಕೆ ಕಾಕತಾಳೀಯವೆಂಬಂತೆ 1993ರ ಮಾರ್ಚ 25ರಂದು ಈ ಎಲ್ ಸಾಲ್ವೇಡಾರ್ ಅವರು ಡೇ ಆಫ್ ಫ್ರೀಡಂ ಟು ಬಿ ಕನ್‍ಸೀವಡ್ ಎಂಬ ದಿನವನ್ನು ರಾಷ್ಟ್ರೀಯ ರಜಾ ದಿನವನ್ನಾಗಿ ಘೋಷಿಸಿದ್ದರು. ಅರಜೆಂಟಿನಾದಲ್ಲಿ 1998ರಲ್ಲಿ 1999ರಲ್ಲಿ ಚಿಲಿ ದೇಶದಲ್ಲಿ ಹೀಗೆ ಅನೇಕ ದೇಶಗಳಲ್ಲಿ ಅಜನಿತ ಮಕ್ಕಳ ದಿನ ಆಚರಣೆಯು ಚಾಲ್ತಿಗೆ ಬಂದಿತು.

ಜನನ ಎಲ್ಲರ ಹಕ್ಕು ಆದರೆ ಭ್ರೂಣ ಹತ್ಯೆ ತಪ್ಪು ಮತ್ತು ಪಾಪ ಎನ್ನುವ ವಿಷಯವನ್ನು ಜನರಿಗೆ ತಿಳಿಸುವ ಸಲುವಾಗಿ ಈ ದಿನದ ಆಚರಣೆಯನ್ನು ಆರಂಭಿಸಲಾಗಿದೆ. ಕಾನೂನಾತ್ಮಕವಾಗಿ ಭ್ರೂಣ ಹತ್ಯೆ ಅಪರಾಧವಾದಾಗ್ಯೂ ಇಂತಹ ಹೇಯ ಕೃತ್ಯಕ್ಕೆ ಜನ ಮುಂದಾಗುತ್ತಾರೆ. ಹಲವು ದೇಶಗಳಲ್ಲಿ ಗರ್ಭಪಾತಕ್ಕೆ ಹಲವು ಕಾರಣವಿರಬಹುದು ಈ ದಿನಗಳಲ್ಲಿ ಇಂತಹ ಗರ್ಭಪಾತಗಳ ಸಂಖ್ಯೆ ಹೆಚ್ಚುತ್ತಿರುವುದರಿಂಧ ಜಾಗತಿಕವಾಗಿ ಈ ದಿನವನ್ನು ಆಚರಿಸುತ್ತಾರೆ. ಅಸುರಕ್ಷಿತ ಲೈಂಗಿಕ ಸಂಬಂಧ, ಬಲಾತ್ಕಾರ, ಹೆಣ್ಣುಮಗು ಎಂಬ ಕಾರಣ ಈ ರೀತಿ ಅನೇಕ ಕಾರಣಗಳು ಗರ್ಭಪಾತ ಮಾಡಿಸಿಕೊಳ್ಳುವವರಿಗೆ ದೊರೆಯುತ್ತದೆ.

ಆದರೆ ಭ್ರೂಣ ಹತ್ಯೆ ಕೇವಲ ಪಾಪ ಅಥವಾ ಅಪರಾಧ ಅಷ್ಟೇ ಅಲ್ಲದೇ ಆರೋಗ್ಯಕ್ಕೂ ಹಾನಿಕರ ಇಂತಹ ಸೂಕ್ಷ್ಮ ವಿಚಾರವನ್ನು ಜನರಿಗೆ ಮನದಟ್ಟು ಮಾಡಿಸಿಕೊಡುವ ಸಲುವಾಗಿ ಈ ದಿನದ ಆಚರಣೆಯನ್ನು ಮಾಡಲಾಗುತ್ತದೆ. ಕೆಲವು ರಾಷ್ಟ್ರಗಳಲ್ಲಿ ಮಹಿಳೆಯ ಜೀವ ರಕ್ಷಣೆಯ ಸಲುವಾಗಿ ಗರ್ಭಪಾತಕ್ಕೆ ಕೂಡ ಅವಕಾಶವಿದೆ. ಆಯಾ ದೇಶದ ಕಾನೂನಿಗೆ ಅನುಗುಣವಾಗಿ ನಡೆದರೂ ಹುಟ್ಟುವ ಮಗುವನ್ನು ಹುಟ್ಟುವ ಮೊದಲೇ ಹೊಸಕಿ ಹಾಕುವುದ ಅಮಾನವೀಯ ಕೆಲಸವಾಗುತ್ತದೆ.

ವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಯನದ ಪ್ರಕಾರ ವರ್ಷದಲ್ಲಿ 40-50 ಮಿಲಿಯನ್ ಗರ್ಭಪಾತಗಳು ನಡೆಯುತ್ತಿವೆ. ಅಂದರೆ ದಿನ ಒಂದಕ್ಕೆ ಸರಾಸರಿ 1, 25,000 ಭ್ರೂಣಗಳು ವಿಶ್ವದಾದ್ಯಂತ ಮರಣ ಹೊಂದುತ್ತಿವೆ. ಕೆಲವು ಸಂದರ್ಭಗಳಲ್ಲಿ ಭ್ರೂಣದ ಬೆಳವಣಿಗೆ ಸರಿಯಾಗಿ ಆಗದೇ ಇದ್ದಾಗ, ತಾಯಿಯ ಆರೋಗ್ಯ ಸ್ಥಿತಿ ಅಥವಾ ಜೀವಕ್ಕೆ ಅಪಾಯ ಇದ್ದಾಗ ಗರ್ಭಪಾತ ಅನಿವಾರ್ಯವಾಗುತ್ತದೆ. ಅನವಶ್ಯಕವಾಗಿ ತಿಳುವಳಿಕೆ ಇಲ್ಲದೇ ಅಥವಾ ಬೇಜವಾಬ್ದಾರಿತನದಿಂದ ಭ್ರೂಣ ಹತ್ಯೆ ಮಾಡುವವರ ವಿರುದ್ಧ ಈ ದಿನದ ಆಚರಣೆಯನ್ನು ಮಾಡುತ್ತಾರೆ.

ಗರ್ಭಪಾತದಿಂದ ಕೇವಲ ದೈಹಿಕ ಆರೋಗ್ಯದ ಮೇಲಷ್ಟೇ ಅಲ್ಲದೇ ಮಾನಸಿಕವಾಗಿ ಖಿನ್ನರಾಗುವ ಅಥವಾ ಅಪರಾಧೀ ಭಾವನೆಗೆ ಬಿದ್ದು ಮಾನಸಿಕ ಕಾಯಿಲೆಗೂ ತುತ್ತಾಗಬಹುದಾದ ಸಾಧ್ಯತೆ ಹೆಚ್ಚಿರುವುದರಿಂದ ಗರ್ಭಪಾತವನ್ನು ಮಾಡಿಸಿಕೊಳ್ಳಬಾರದು 2024ರ ಅಂತಾರಾಷ್ಟ್ರೀಯ ಅಜನಿತ ಮಕ್ಕಳ ದಿನದ ಥೀಮ್ " ಕಾನೂನು ಬಾಹಿರ ಮತ್ತು ಅನವಶ್ಯಕ ಗರ್ಭಪಾತಗಳನ್ನು ತಡೆಯಿರಿ" ಎಂಬುದಾಗಿದೆ.

ಇಂದಿನ ಸಮಾಜದಲ್ಲಿ ನೈತಿಕತೆ, ಮುಕ್ತತೆ, ಸಂಬಂಧಗಳ ಸೂಕ್ಷ್ಮತೆಯ ಜೊತೆಗೆ ಬದ್ಧತೆಯೂ ಕಡಿಮೆ ಆಗಿರುವುದರಿಂದ ಅನವಶ್ಯಕ ಗರ್ಭಪಾತಗಳ ಸಂಖ್ಯೆ ಹೆಚ್ಚಾಗಿದೆ. ಸಾಮಾಜಿಕವಾಗಿ ಇಂತಹ ಗರ್ಭಪಾತಗಳು ಹಾನಿಕಾರಕ ಅದರಿಂದ ಇಂತಹ ಗರ್ಭಪಾತಗಳನ್ನು ತಪ್ಪಿಸುವ ಸಲುವಾಗಿ ಜನರಲ್ಲಿ ಜಾಗೃತಿ ಹಾಗೂ ಮಾಹಿತಿಗಳನ್ನು ತಿಳಿಸಿ ದಿನ ಆಚರಣೆಯನ್ನು ಮಾಡಬಹುದಾಗಿದೆ.

- ಮಾಧುರಿ ದೇಶಪಾಂಡೆ, ಬೆಂಗಳೂರು

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು