LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Feature Article

"ಪ್ರೀತಿಯೊಂದೆ ಭಾವನೆ ಬೇರೆ ಭಾಷೆ ಬೇರೆ ಪ್ರೀತಿಯೊಂದೆ'

ಈ ಜಗತ್ತು ನಿಂತಿರುವುದೇ ಪ್ರೀತಿಯ ಮೇಲೆ. ತಾಯಿ ಪ್ರೀತಿ, ತಂದೆಯ ಪ್ರೀತಿ, ಒಡಹುಟ್ಟಿದವರ ಪ್ರೀತಿ, ಸ್ನೇಹಿತರ ಪ್ರೀತಿ, ದಾಂಪತ್ಯದ ಪ್ರೀತಿ ಹೀಗೆ ಪ್ರೀತಿಯ ಬಗೆಗಳು.ಯಾವುದೇ ದೇಶ,ಭಾಷೆ ಇರಲಿ ಜನರ ಮನಸಿನ ಭಾವನೆಗಳು ಒಂದೇ. ಎಲ್ಲರಿಗೂ ದುಃಖ, ನೋವು, ಸಂತೋಷ, ಸಂತೃಪ್ತಿ ಇದ್ದೇ ಇರುತ್ತದೆ ಆದರೆ ಅದನ್ನು ವ್ಯಕ್ತ ಪಡಿಸುವ ರೀತಿ ಬೇರೆ ಬೇರೆ ರೀತಿಯದು. ತಮಗೆ ಎಲ್ಲಿ ಆರಾಮದಾಯಕ ವಾತಾವರಣ ಇರುತ್ತದೋ ಅಲ್ಲಿ ಭಾಷೆಗಿಂತ ಭಾವನೆ ವ್ಯಕ್ತವಾಗುತ್ತದೆ.

ಸ್ಪಂದಿಸುವ ಮನಸಿದ್ದರೆ ಭಾಷೆಯ ಅವಶ್ಯಕತೆ ಇರುವುದಿಲ್ಲ. ಭಾವನೆ ವ್ಯಕ್ತ ಪಡಿಸುವ ಮೂಲಕ ಅವರನ್ನು ಸಂತೈಸಬಹುದು.
ಒಮ್ಮೆ ಒಂದು ಆಸ್ಪತ್ರೆಯಲ್ಲಿ ತನ್ನ ಪತಿಯ ಹೃದಯ ಶಸ್ತ್ರಚಿಕಿತ್ಸೆಗಾಗಿ ಸೇರ್ಪಡೆಯಾಗಿದ್ದ ಸಂದರ್ಭದಲ್ಲಿ ಪತ್ನಿ ಬಹಳ ದುಃಖಿತಳಾಗಿ ಹೊರಗಡೆ ಕಲ್ಲುಬೆಂಚಿನ ಮೇಲೆ ಬಹಳ ಚಿಂತಿತಳಾಗಿ, ಗಂಭೀರವಾಗಿ ಯೋಚಿಸುತ್ತಾ ಕುಳಿತಿರುವಾಗ, ಅಲ್ಲಿಗೆ ಮತ್ತೊಬ್ಬಳು ಹೆಂಗಸು ಬಂದು ಕುಳಿತಳು, ಅವಳ ಪತಿಯೂ ಹೃದಯಕ್ಕೆ ಸಂಬಂಧಪಟ್ಟ ಖಾಯಿಲೆ ವಾಸಿ ಮಾಡಿಸಲು ಆಸ್ಪತ್ರೆ ಸೇರಿಸಿ ಜೊತೆಗಿದ್ದಳು.

ಇಬ್ಬರೂ ಒಬ್ಬರನ್ನೊಬ್ಬರು ಗಮನಿಸುತ್ತಲೇ ಇದ್ದರು. ಅವಳ ಪಕ್ಕದಲ್ಲಿ ಇವಳು ಸುಮ್ಮನೆ ಜೊತೆಯಲ್ಲಿ ಕುಳಿತಳು. ಇಬ್ಬರಲ್ಲೂ ಮಾತುಕತೆಯಿಲ್ಲ ಬಹಳ ಹೊತ್ತು ಹೀಗೆ ಕುಳಿತಿದ್ದರು ಅವಳು ಇವಳ ಕೈ ಮೇಲೆ ಮತ್ತಗೆ ಅದುಮಿದಳು. ಇಬ್ಬರ ಕಣ್ಣಂಚಿನಲ್ಲೂ ನೀರಿತ್ತು. ಅಲ್ಲಿ ಆಡುವ ಭಾಷೆಗಿಂತ ಮೌನದ ಭಾಷೆ ಇಬ್ಬರ ಮನಸ್ಥಿತಿ ತಿಳಿಸಿತ್ತು.

ಒಬ್ಬರಿಗೊಬ್ಬರು ಭಾಷೆಯ ಸಂಮೋಹನ ಕ್ರಿಯೆಯಿಂದ ಇಬ್ಬರ ಅಥವಾ ಗುಂಪಿನ ನಡುವೆ ಮಾತುಕತೆ ಚರ್ಚೆಯಾಗುತ್ತದೆ. ಭಾಷೆ ಒಂದು ಸಂಪರ್ಕ ಸಾಧನವಷ್ಟೇ. ಭಾಷೆಗೂ ಮಿಗಿಲಾಗಿ ಭಾವನೆಗಳೇ ವ್ಯಕ್ತಪಡಿಸುವ ಸಾಧನ.ಹುಟ್ಟಿದ ಮಗುವಿಗೆ ಮಾತು ಬರುವುದಿಲ್ಲ ಯಾವ ಭಾಷೆಯೂ ಅರ್ಥವಾಗುವುದಿಲ್ಲ ಆದರೆ ತಾಯಿಯ ಮೃದು ಸ್ಪರ್ಷ, ಮೂಕ ಮಾತು, ಭಾವಗಳು ಮಗುವಗೆ ಅರ್ಥವಾಗುತ್ತದೆ. ಅದು ದೊಡ್ಡದಾಗುತ್ತಾ ತನ್ನ ಪರಿಸರದ ಸುತ್ತಾ ಮಾತುಕತೆ ಗಮನಿಸಿ, ಕೇಳಿಸಿಕೊಂಡು ಮಾತನಾಡಲು ಶುರುಮಾಡುತ್ತದೆ.

ಭಾಷೆ ಭಾಷೆಯ ನಡುವೆ ಭಾವನೆಗಳು ತುಂಬಾ ಮಹತ್ವ ಹೊಂದಿರುತ್ತದೆ. ಪ್ರೇಮಿಗಳಿಗೆ ಮೊದಲ ನೋಟದಲ್ಲೇ ಪ್ರೇಮಾಂಕುರವಾದಾಗ ಅಲ್ಲಿ ಭಾಷೆಗಿಂತ ಭಾವ ಮೊದಲಾಗುತ್ತದೆ. ನಂತರ ಯಾವ ಭಾಷೆ ಎಂದು ಮಾತುಗಳ ಮೂಲಕ ವ್ಯಕ್ತವಾಗುತ್ತದೆ.ಜನರ ಸಂಪರ್ಕ ಸಾಧನೆಗೆ ಭಾಷೆಯೇ ಮುಖ್ಯ ಸಾಧನ. ಎಷ್ಟೋ ಜನರ ನಡುವೆ ಭಾಷೆ, ಭಾವ ಭಿನ್ನವಾಗಿರುತ್ತದೆ.

ಯಾವುದೇ ಭಾಷೆ ಇರಲಿ ಭಾವನೆಗೆ ಬೆಲೆ ಇರುತ್ತದೆ. ಕೆಲವೊಮ್ಮೆ ಭಾಷೆ ಒರಟಾದರೂ ಭಾವ ಕೋಮಲವಾಗಿರುತ್ತದೆ. ಭಾಷೆ ಭಾಷೆಗಳ ಅಂತರ ಬಿಟ್ಟು ಪ್ರೀತಿಯ ಭಾಷೆ ಅರಿತಾಗ ಜೀವನ ಬಹಳ ಸರಳವಾಗಿರುತ್ತದೆ. ಭಾಷೆಯ ಗೌರವ ಭಾವನೆಯ ಗೌರವವೂ ಹೌದು. ಭಾಷೆ ಯಾವುದಾಗಲಿ ಭಾವನೆ ನಿಷ್ಕಲ್ಮಶವಾಗಿರಬೇಕು.

 

ಚಂಪಾ ಚಿನಿವಾರ್
ಆಪ್ತಸಮಾಲೋಚಕಿ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು